ಮುಂಬೈ: ಜಮ್ಮು-ಕಾಶ್ಮೀರದ ಉರಿಯಲ್ಲಿ ಇತ್ತೀಚೆಗೆ 18 ಮಂದಿ ಭಾರತೀಯ ಸೈನಿಕರ ಹತ್ಯೆಯಾಗಿದ್ದರಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಶ್ಚಯಿಸಿದ್ದಾರೆ. ಇಂದು ಅವರ 87ನೇ ಹುಟ್ಟುಹಬ್ಬ. ಆದರೆ ಎಲ್ಲೆಡೆಯೂ ಕತ್ತಲೆ ತುಂಬಿಕೊಂಡಿರುವಾಗ, ಪಾಕಿಸ್ತಾನದ ಜೊತೆ ಸಂಬಂಧ ಹದಗೆಡುತ್ತಿರುವಾಗ, ಯುದ್ಧ, ಸೈನಿಕರ ಸಾವಿನ ಸುದ್ದಿ ಮಧ್ಯೆ ಹುಟ್ಟುಹಬ್ಬ ಆಚರಿಸುವ ವಾತಾವರಣವಿಲ್ಲ. ಆ ಖುಷಿಯೂ ಇಲ್ಲ ಎಂದಿದ್ದಾರೆ ಲತಾ. ಪಾಕಿಸ್ತಾನದವರು ಶಾಂತಿ ಮತ್ತು ಖುಷಿಯಿಂದ ಇದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.