ಮುಂಬೈ: ರಾಮಾಯಣ ರಚನಕಾರಾ ವಾಲ್ಮೀಕಿ ಮಹರ್ಷಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ರಾಖಿ ಸಾವಂತ್ ಆಕ್ಷೇಪಾರ್ಹ ಹೇಳಿಕೆ ಸಂಬಂಧ ನಿನ್ನೆ ಸ್ಥಳೀಯ ನ್ಯಾಯಾಲಯದವೊಂದು ಬಂಧನ ಆದೇಶವನ್ನು ಜಾರಿಗೊಳಿಸಿತ್ತು. ಈ ಆದೇಶ ಹಿನ್ನೆಲೆ ಪಂಜಾಬ್ ಪೊಲೀಸರು ಮುಂಬೈನಲ್ಲಿ ರಾಖಿ ಸಾವಂತ್ ರನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಖಾಸಗಿ ವಾಹನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಖಿ ಸಾವಂತ್ ಅವರು ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಹೇಳಿಕೆಯನ್ನು ನೀಡಿದ್ದರು ಎಂದು ದೂರು ದಾಖಲಾಗಿತ್ತು.
ಆ ದೂರನ್ನು ಆಧರಿಸಿ ಮಾರ್ಚ್ 9 ರಂದು ನ್ಯಾಯಾಲಯ ರಾಖಿ ಸಾವಂತ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ ಎಂದು ಪೊಲೀಸರು ಹೇಳಿದ್ದರು.