ವಿನೋದ್ ಖನ್ನಾ ನಿಧನ: ಬಾಹುಬಲಿ 2 ಪ್ರಿಮಿಯರ್ ಶೋ ರದ್ದು ಪಡಿಸಿದ ಚಿತ್ರತಂಡ

ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ನಿಧನ ಹಿನ್ನೆಲೆ ಮುಂಬೈನಲ್ಲಿ ಆಯೋಜಿಸಲಾಗಿದ್ದ ಬಾಹುಬಲಿ-2 ಪ್ರಿಮಿಯರ್ ಶೋ ಅನ್ನು ಚಿತ್ರತಂಡ ರದ್ದುಪಡಿಸಿದೆ...
ಬಾಹುಬಲಿ 2
ಬಾಹುಬಲಿ 2
Updated on
ಮುಂಬೈ: ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ನಿಧನ ಹಿನ್ನೆಲೆ ಮುಂಬೈನಲ್ಲಿ ಆಯೋಜಿಸಲಾಗಿದ್ದ ಬಾಹುಬಲಿ-2 ಪ್ರಿಮಿಯರ್ ಶೋ ಅನ್ನು ಚಿತ್ರತಂಡ ರದ್ದುಪಡಿಸಿದೆ. 
ಬಾಲಿವುಡ್ ದಿಗ್ಗಜರಿಗಾಗಿ ಬಾಹುಬಲಿ-2 ಪ್ರಿಮಿಯರ್ ಶೋ ಅನ್ನು ಚಿತ್ರ ತಂಡ ಆಯೋಜಿಸಿತ್ತು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ವಿನೋದ್ ಖನ್ನಾ ಅವರು ಇಂದು ವಿಧಿವಶರಾದ ಹಿನ್ನೆಲೆ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರಿಮಿಯರ್ ಶೋ ಅನ್ನು ರದ್ದುಪಡಿಸಿರುವುದಾಗಿ ಚಿತ್ರ ತಂಡ ಹೇಳಿಕೊಂಡಿದೆ. 
ಬಾಹುಬಲಿ 2 ಹಿಂದಿ ಆವೃತಿಯ ಚಿತ್ರವನ್ನು ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹಾರ್ ವಿತರಣೆ ಮಾಡುತ್ತಿದ್ದು ಬಾಲಿವುಡ್ ದಿಗ್ಗಜರಿಗಾಗಿ ಮುಂಬೈನಲ್ಲಿ ಪ್ರಿಮಿಯರ್ ಶೋ ಅನ್ನು ಆಯೋಜಿಸಿದ್ದರು. 
ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ನಿಧನ ಹಿನ್ನೆಲೆ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಬಾಹುಬಲಿ 2 ಪ್ರಿಮಿಯರ್ ಶೋ ಅನ್ನು ರದ್ದುಗೊಳಿಸಲಾಗಿದೆ ಎಂದು ಕರಣ್ ಜೋಹಾರ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com