ಪದ್ಮಾವತಿ ನಂತರ ವಿವಾದದಲ್ಲಿ ಟೈಗರ್ ಜಿಂದಾ ಹೈ ಚಿತ್ರ

ಸಲ್ಮಾನ್ ಖಾನ್ ನಟನೆಯ ಮೆಗಾ ಬಜೆಟ್ ಚಿತ್ರ ಟೈಗರ್ ಜಿಂದಾ ಹೈ ಇದೇ 22ಕ್ಕೆ ಬಿಡುಗಡೆಯಾಗಲಿದ್ದು ....
ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್
ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್
ಮುಂಬೈ: ಸಲ್ಮಾನ್ ಖಾನ್ ನಟನೆಯ ಮೆಗಾ ಬಜೆಟ್ ಚಿತ್ರ ಟೈಗರ್ ಜಿಂದಾ ಹೈ ಇದೇ 22ಕ್ಕೆ ಬಿಡುಗಡೆಯಾಗಲಿದ್ದು ಅದಕ್ಕೂ ಮುನ್ನ ಇದೀಗ ವಿವಾದಕ್ಕೆ ಸಿಲುಕಿದೆ.ಅದು ರಾಜಕೀಯ ತಿರುವು ಪಡೆದುಕೊಂಡಿದೆ. 
ಟೈಗರ್ ಜಿಂದಾ ಹೈ ಚಿತ್ರದ ಶೋ ಬುಕ್ ಮಾಡದಂತೆ ಸಿನಿಮಾ ಥಿಯೇಟರ್ ಮಾಲಿಕರಿಗೆ ಮಹಾರಾಷ್ಟ್ರ ನವ ನಿರ್ಮಾಣ ಚಿತ್ರಪತ್ ಸೇನಾ(ಎಂಎನ್ ಸಿಎಸ್) ಎಚ್ಚರಿಕೆ ನೀಡಿದ್ದಲ್ಲದೆ ಎರಡು ಮರಾಠಿ ಚಿತ್ರಗಳಾದ ದೇವ ಮತ್ತು ಗಚ್ಚಿ ಚಿತ್ರಗಳ ಪ್ರದರ್ಶನಕ್ಕೆ ಪ್ರಮುಖ ಸಮಯವನ್ನು ನೀಡಬೇಕೆಂದು ಸಂಘಟನೆ ಅಧ್ಯಕ್ಷ ಅಮೆ ಖೊಪ್ಕರ್ ಹೇಳಿದ್ದಾರೆ. ಈ ವಿವಾದಕ್ಕೆ ಕಾಂಗ್ರೆಸ್ ಮತ್ತು ಶಿವಸೇನೆ ಪಕ್ಷಗಳು ಕೂಡ ಸೇರಿಕೊಂಡಿವೆ.
ಟೈಗರ್ ಜಿಂದಾ ಹೈ ಸೇರಿದಂತೆ ಯಾವುದೇ ಚಿತ್ರಗಳ ಬಿಡುಗಡೆಗೆ ನಮ್ಮ ವಿರೋಧವಿಲ್ಲ. ಆದರೆ ಚಿತ್ರ ಪ್ರದರ್ಶನದ ಪ್ರಮುಖ ಸಮಯಗಳನ್ನು ಕೇವಲ ಒಂದೇ ಚಿತ್ರಕ್ಕೆ ಮಾತ್ರ ಏಕೆ ಮೀಸಲಿಡಬೇಕು, ಬೇರೆ ಚಿತ್ರಗಳಿಗೆ ಪ್ರದರ್ಶನಕ್ಕೆ ಏಕೆ ಸಮಯಗಳನ್ನು ನೀಡುವುದಿಲ್ಲ ಎಂದು ಖೊಪ್ಕರ್ ಪ್ರಶ್ನಿಸಿದ್ದಾರೆ. 
ನಿನ್ನೆ ಮಹಾರಾಷ್ಟ್ರ ನವ ನಿರ್ಮಾಣ ಚಿತ್ರಪತ್ ಸೇನಾ ಎಲ್ಲಾ ಥಿಯೇ ಟರ್ ಮಾಲಿಕರಿಗೆ ಪತ್ರ ಬರೆದು ಮರಾಠಿ ಚಿತ್ರಗಳ ಪ್ರದರ್ಶನಕ್ಕೆ ಮುಖ್ಯ ಸಮಯವನ್ನು ನೀಡಬೇಕು, ಇಲ್ಲದಿದ್ದರೆ ಸಲ್ಮಾನ್ ಖಾನ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com