ದೀಪಿಕಾ ಗೆ ಅಪೌಷ್ಟಿಕತೆ ಕಾಡುತ್ತಿದೆ: ಬಾಲಿವುಡ್ ಬೆಡಗಿಯ ಹೊಸ ಫೋಟೋಗೆ ಇನ್‌ಸ್ಟ್ರಾಗ್ರಾಮ್‌ ನಲ್ಲಿ ಟ್ರಾಲ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತೂಕ ಇಳಿಸಿಕೊಂಡಿದ್ದು, ವ್ಯಾನಿಟಿ ಫೇರ್ ನಿಯತಕಾಲಿಕೆಗಾಗಿ ನಡೆಸಿದ್ದ ಇತ್ತೀಚಿನ ಫೋಟೋ ಶೂಟ್ ನ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿ....
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತೂಕ ಇಳಿಸಿಕೊಂಡಿದ್ದು, ವ್ಯಾನಿಟಿ ಫೇರ್ ನಿಯತಕಾಲಿಕೆಗಾಗಿ ನಡೆಸಿದ್ದ ಇತ್ತೀಚಿನ ಫೋಟೋ ಶೂಟ್ ನ ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದು, ಇನ್ಸ್ಟ್ರಾಗ್ರಾಮ್ ಬಳಕೆದಾರರು ದೀಪಿಕಾ ಪಡುಕೋಣೆಯನ್ನು ಟ್ರಾಲ್ ಮಾಡಿದ್ದಾರೆ. 
ದೀಪಿಕಾ ಅತಿ ಹೆಚ್ಚು ತೂಕ ಇಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಾಲೆಳೆದಿರುವ ಇನ್ಸ್ಟ್ರಾಗ್ರಾಮ್ ಬಳಕೆದಾರರು, ದೀಪಿಕಾ ಪಡುಕೋಣೆ ಅಪೌಷ್ಟಿಕತೆ ಎದುರಿಸುತ್ತಿರುವಂತಿದೆ ಎಂದು ಟ್ರಾಲ್ ಮಾಡಿದ್ದಾರೆ. ಇನ್ನು ಕೆಲವರು ರಣ್ ಬೀರ್ ಕಪೂರ್ ನ ಇನ್ನೂ ನೀವು ಮರೆತಿಲ್ಲವೆಂದು ತೋರುತ್ತದೆ, ಆ ಖಿನ್ನತೆಯಿಂದ ಹೊರಬಂದು ಸರಿಯಾಗಿ ತಿನ್ನಿ ಎಂದು ಸಲಹೆ ನೀಡಿದ್ದಾರೆ. 
ಇನ್ನೂ ಹಲವರು ದೀಪಿಕಾ ಅವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com