ಮೊರಾಕ್ಕೋನಲ್ಲಿ ಹಣಕ್ಕಾಗಿ ರಸ್ತೆಯಲ್ಲಿ ನೃತ್ಯ ಮಾಡಿದ ರಣ್ ಬೀರ್ ಕಪೂರ್!

ಅನುರಾಗ್ ಬಸು ಅವರ ಮುಂದಿನ ಚಿತ್ರದ ದಿಲ್ ಉಲ್ಲು ಕಾ ಪಥಾ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ರಣ್ ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಹಣ ಗಳಿಕೆಗಾಗಿ ರಸ್ತೆಯಲ್ಲಿ ನೃತ್ಯ ಮಾಡಿದ್ದಾರೆ.
ರಣ್ ಬೀರ್ ಕಪೂರ್
ರಣ್ ಬೀರ್ ಕಪೂರ್
ಅನುರಾಗ್ ಬಸು ಅವರ ಮುಂದಿನ ಚಿತ್ರದ ದಿಲ್ ಉಲ್ಲು ಕಾ ಪಥಾ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ರಣ್ ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಹಣ ಗಳಿಕೆಗಾಗಿ ರಸ್ತೆಯಲ್ಲಿ ನೃತ್ಯ ಮಾಡಿದ್ದಾರೆ. 
ರಸ್ತೆಯಲ್ಲಿ ನೃತ್ಯ ಮಾಡಿದರೆ ಜನರು ಸೇರುತ್ತರೋ ಅಥವಾ ಗದ್ದಲ ಉಂಟಾಗುತ್ತದೋ ಎಂಬುದನ್ನು ಪರೀಕ್ಷಿಸಲು ಅನುರಾಗ್ ಬಸು ಹಾಗೂ ಅವರ ಸಹಾಯಕರು ಮೊರಾಕೊದ ರಸ್ತೆಗಳಲ್ಲಿ ಮೊದಲು ನೃತ್ಯ ಮಾಡಲು ಪ್ರಾರಂಭಿಸಿದರು. ಅಚ್ಚರಿಯೆಂಬಂತೆ ಕೆಲವೇ ಕ್ಷಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದರು. 
ನಿರ್ದೇಶಕರ ಐಡಿಯಾ ವರ್ಕ್ ಔಟ್ ಆದ ಹಿನ್ನೆಲೆಯಲ್ಲಿ ರಣ್ ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಹೆಜ್ಜೆ ಹಾಕಿದರು, ಅಷ್ಟೇ ಅಲ್ಲದೇ ರಣ್ ಬೀರ್ ಕಪೂರ್ ಗೆ ಹಣ ಸಂಗ್ರಹಿಸುವಂತೆಯೂ ಕೇಳಲಾದ ವಿನೋದದ ಸಂರ್ಭವೂ ಎದುರಾಯಿತು ಎಂದು ಅನುರಾಗ್ ಬಸು ಸಂತಸದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. "ಹೌದು ನೃತ್ಯ ಮಾಡಿದ ರಣ್ ಬೀರ್ ಕಪೂರ್ ಗೆ ಹಣ ಸಂಗ್ರಹಿಸುವಂತೆ ಕೇಳಿದೆ. ನಂಬುತ್ತೀರಾ? ರಣ್ ಬೀರ್ ಕಪೂರ್ 250-300 ಮೊರೊಕನ್ ದಿರ್ಹಾಮ್ಸ್ ನ್ನು ಸಂಗ್ರಹಿಸಿದ್ದರು, ಹಾಗೆಯೇ ಹಾಡಿನಲ್ಲಿ ರಣ್ ಬೀರ್ ಕಪೂರ್ ನಿಜವಾಗಿಯೂ ಜನರಿಂದ ಹಣ ಸಂಗ್ರಹಿಸುತ್ತಾರೆ ಎಂದು ಅನುರಾಗ್ ಬಸು ಹೇಳಿದ್ದಾರೆ. ರಣ್ ಬೀರ್ ಕಪೂರ್ ನಟಿಸಿರುವ ಜಗ್ಗಾ ಜಾಸೂಸ್ ಜುಲೈ 14 ರಂದು ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com