ನಾನು ಕೇಳುವ ಮುನ್ನವೇ ಅತಿಥಿ ಪಾತ್ರದಲ್ಲಿ ನಟಿಸಲು ಶಾರುಖ್ ಸೈ ಅಂದಿದ್ರು: ಸಲ್ಮಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಟ್ಯೂಬ್‌ಲೈಟ್‌ ಚಿತ್ರ ಬೆಳ್ಳಿ ಪರದೆಗೆ ಅಪ್ಪಳಿಸಲು ರೆಡಿಯಾಗಿದ್ದು ನಟ ಸಲ್ಮಾನ್ ಖಾನ್ ಚಿತ್ರದ ಪ್ರಚಾರದಲ್ಲಿ ತೊಡಿಗಿದ್ದಾರೆ...
ಸಲ್ಮಾನ್ ಖಾನ್
ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಟ್ಯೂಬ್‌ಲೈಟ್‌ ಚಿತ್ರ ಬೆಳ್ಳಿ ಪರದೆಗೆ ಅಪ್ಪಳಿಸಲು ರೆಡಿಯಾಗಿದ್ದು ನಟ ಸಲ್ಮಾನ್ ಖಾನ್ ಚಿತ್ರದ ಪ್ರಚಾರದಲ್ಲಿ ತೊಡಿಗಿದ್ದಾರೆ. 
ಟ್ಯೂಬ್‌ಲೈಟ್‌ ಚಿತ್ರದ ಅತಿಥಿ ಪಾತ್ರವೊಂದರಲ್ಲಿ ಶಾರುಖ್ ಖಾನ್ ಅಭಿನಯಿಸಿದ್ದಾರೆ. ಈ ಪಾತ್ರದಲ್ಲಿ ಅಭಿನಯಿಸುವಂತೆ ಕೇಳಬೇಕೆಂದು ನಾನು ಅವರಿಗೆ ಕರೆ ಮಾಡಿದೆ. ಪಾತ್ರದ ಕುರಿತು ನಾನು ಹೇಳಿದ ಕೂಡಲೇ ಶಾರುಖ್ ತಾವು ಆ ಪಾತ್ರದಲ್ಲಿ ಅಭಿನಯಿಸುವುದಾಗಿ ಹೇಳಿದರು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. 
ನಿರ್ದೇಶಕ ಕಬೀರ್ ಖಾನ್ ಕಥೆಯನ್ನು ಹೇಳಬೇಕಾದರೆ ಅದರಲ್ಲಿ ಚಿಕ್ಕ ಪಾತ್ರವೊಂದಿದ್ದು ಅದರಲ್ಲಿ ಶಾರುಖ್ ಖಾನ್ ನಟಿಸಿದರೆ ಉತ್ತಮ ಎಂದು ಹೇಳಿದ್ದರು. ಅಂತೆ ಚಿತ್ರದಲ್ಲಿ ಶಾರುಖ್ ಅಭಿನಯಿಸಿದ್ದು ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಸಲ್ಮಾನ್ ಹೇಳಿದ್ದಾರೆ. 
ಟ್ಯೂಬ್‌ಲೈಟ್‌ ಚಿತ್ರ 1962 ಭಾರತ-ಚೀನಾ ಯುದ್ಧದ ಕಥಾವಸ್ತುವನ್ನು ಹೊಂದಿದೆ. ಈದ್ ಹಬ್ಬದ ಪ್ರಯುಕ್ತ ಚಿತ್ರ ಜೂನ್ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com