2 ಸಾವಿರ ಕೋಟಿ ಕ್ಲಬ್ ನಿರ್ಮಿಸಿದ 'ದಂಗಲ್'

ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ವಿಶ್ವ ಬಾಕ್ಸ್ ಆಫೀಸ್ ನಲ್ಲಿ 2 ಸಾವಿರ ಕೋಟಿ ಗಳಿಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ...
ದಂಗಲ್
ದಂಗಲ್
ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ವಿಶ್ವ ಬಾಕ್ಸ್ ಆಫೀಸ್ ನಲ್ಲಿ 2 ಸಾವಿರ ಕೋಟಿ ಗಳಿಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. 
ಭಾರತ ಸೇರಿದಂತೆ ವಿದೇಶಗಳಲ್ಲಿ ತೆರಕಂಡಿದ್ದ ದಂಗಲ್ ಚಿತ್ರ 840 ಕೋಟಿ ಗಳಿಕೆ ಮಾಡಿತ್ತು. ನಂತರ ಚೀನಾದಲ್ಲಿ ಬಿಡುಗಡೆಯಾದ ದಂಗಲ್ ಚಿತ್ರ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು 53ನೇ ದಿನದ ಪ್ರದರ್ಶನದಲ್ಲಿ 2.5 ಕೋಟಿ ಗಳಿಸುವ ಮೂಲಕ ಚಿತ್ರ 2000 ಕೋಟಿ ಕ್ಲಬ್ ಸೇರಿದೆ. ಇದರೊಂದಿಗೆ 2 ಸಾವಿರ ಕೋಟಿ ಕ್ಲಬ್ ಸೇರಿದ ಭಾರತೀಯ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ. 
ದಂಗಲ್ ಚಿತ್ರ 2 ಸಾವಿರ ಕೋಟಿ ಗಳಿಸಿದ ಮೊದಲ ಇಂಗ್ಲಿಷೇತರ ಚಿತ್ರವೆಂಬ ಖ್ಯಾತಿಗೆ ಭಾಜನವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com