ರೇಖಾ -ಸಂಜಯ್ ದತ್ ರಹಸ್ಯ ಮದುವೆ: ರೇಖಾ ಜೀವನ ಚರಿತ್ರೆ ಬರೆದ ಲೇಖಕ ಹೇಳಿದ್ದೇನು?

ಬಾಲಿವುಡ್ ನಟಿ ರೇಖಾ ನಟ ಸಂಜಯ್ ದತ್ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದಾರೆ ಎಂಬ ಗಾಸಿಪ್ ಗೆ ಸಂಬಂಧಿಸಿದಂತೆ ರೇಖಾ ಜೀವನ ಚರಿತ್ರೆ ಬರೆದಿರುವ..
ರೇಖಾ ಮತ್ತು ಸಂಜಯ್ ದತ್
ರೇಖಾ ಮತ್ತು ಸಂಜಯ್ ದತ್
Updated on

ಮುಂಬಯಿ: ಬಾಲಿವುಡ್ ನಟಿ ರೇಖಾ ನಟ ಸಂಜಯ್ ದತ್ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದಾರೆ ಎಂಬ ಗಾಸಿಪ್ ಗೆ ಸಂಬಂಧಿಸಿದಂತೆ ರೇಖಾ ಜೀವನ ಚರಿತ್ರೆ ಬರೆದಿರುವ ಲೇಖಕ ಉಸ್ಮಾನ್ ಸ್ಪಷ್ಟನೆ ನೀಡಿದ್ದಾರೆ.

ಬಾಲಿವುಡ್ ನಟಿ ರೇಖಾ ಜೀವನ ಚರಿತ್ರೆ ಕುರಿತ ' ರೇಖಾ- ದಿ ಅನ್‌ಟೋಲ್ಡ್‌ ಸ್ಟೋರಿ' ಪುಸ್ತಕದಲ್ಲಿ ರೇಖಾರ ವೈಯಕ್ತಿಕ ವಿಷಯಗಳು ಪ್ರಸ್ತಾಪಗೊಂಡಿವೆ. ಪತಿ ಮುಖೇಶ್ ಅಗರವಾಲ್ ಸಾವನ್ನಪ್ಪಿದ ನಂತರವೂ ರೇಖಾ ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಿರುವುದು ಏಕೆ ಎಂಬ ವಿಷಯ ಚರ್ಚೆಯಾಗಿದೆ.

1984ರಲ್ಲಿ ಜಮೀನ್ ಅಸ್ಮಾನ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ರೇಖಾ, ಸಂಜಯ್ ಪ್ರೀತಿಸಿದ್ದರಂತೆ. ಅದೇ ಸಮಯದಲ್ಲಿ ಅವರಿಬ್ಬರು ರಹಸ್ಯ ಮದುವೆಯಾಗಿದ್ದಾರೆಂಬ ಸುದ್ದಿ ಹರಡಿತ್ತು. ರೇಖಾ ನಟ ಸಂಜಯ್‌ದತ್‌ ಅವರನ್ನು ಗುಟ್ಟಾಗಿ ಮದುವೆಯಾಗಿರುವುದರಿಂದ ರೇಖಾ ಹಣೆಗೆ ಸಿಂಧೂರ ಹಾಕುತ್ತಾರೆ ಎಂದು ವಿಚಾರ ಎಲ್ಲೆಡೆ ಹರಿದಾಡುತ್ತಿತ್ತು.  ಆದರೆ ಈ ವಿಷಯವನ್ನು ನಟ ಸಂಜಯ ದತ್ ಅವರು ನಿರಾಕರಿಸಿದ್ದರು. ಸಂಜಯ್ ದತ್ ಅಧಿಕೃತವಾಗಿ ಮದುವೆ ವಿಷಯನವನ್ನು ಮ್ಯಾಗ್ ಜೀನ್ ವೊಂದರಲ್ಲಿ ನಿರಾಕರಿಸಿದ್ದರಿಂದ ರೇಖಾ ಜೊತೆಗಿನ ವಿವಾಹದ ಗಾಸಿಪ್ ಸುದ್ದಿ ಮತ್ತಷ್ಟು ಬಲವಾಯಿತು ಎಂದು ಪುಸ್ತಕದಲ್ಲಿ ಬರೆದಿರುವುದಾಗಿ ಉಸ್ಮಾನ್ ತಿಳಿಸಿದ್ದಾರೆ.

ರೇಖಾ ಮತ್ತು ಸಂಜಯ್ ದತ್ ವಿವಾಹದ ಬಗ್ಗೆ ನಾನು ಆತ್ಮ ಚರಿತ್ರೆಯಲ್ಲಿ ಬರೆದಿಲ್ಲ, ಯಾವುದೇ ವಿವಾಹ ನಡೆದಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com