ಇಂಟರ್ ನೆಟ್ ಟ್ರೋಲಿಂಗ್ ಗಳನ್ನು ಖಂಡಿಸಿರುವ ಜಾನ್ ಅಬ್ರಹಂ, ಸಾಮಾಜಿಕ ಜಾಲತಾಣಗಳನ್ನು ನಮ್ಮಲ್ಲಿ ಬಹುತೇಕ ಮಂದಿ ಚತುರತೆಯಿಂದ ಬಳಕೆ ಮಾಡುವುದಿಲ್ಲ. ಲಿಂಗ, ಧರ್ಮ, ಮತದ ಆಧಾರದಲ್ಲಿ ಮತ್ತೊಬ್ಬರಿಗೆ ಅವಮಾನ ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತೇವೆ. ಬುದ್ಧಿವಂತಿಕೆಯಿಂದ ಬಳಕೆ ಮಾಡುವವರೆಗೂ ಸಾಮಾಜಿಕ ಜಾಲತಾಣ ಪ್ರಮುಖ ಸಾಧನವಾಗಿರಲಿದೆ, ನೈಜ ವ್ಯಕ್ತಿತ್ವವಿಲ್ಲದವರು ಬಳಕೆ ಮಾಡಿದರೆ ಪ್ರಮುಖ ಸಾಧನವಾಗುವುದಿಲ್ಲ, ಟ್ರಾಲ್ ಮಾಡುವವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುಖ ತೋರಿಸುವುದಕ್ಕೂ ಧೈರ್ಯವಿರುವುದಿಲ್ಲ ಎಂದು ಜಾನ್ ಅಬ್ರಹಂ ಹೇಳಿದ್ದಾರೆ.