ಕ್ಯಾನೆ ಚಿತ್ರೋತ್ಸವದಲ್ಲಿ ಪಹುನಾ ಟ್ರೇಲರ್ ಬಿಡುಗಡೆ: ಪ್ರಿಯಾಂಕಾ ಚೋಪ್ರಾ ನಿರ್ಮಾಣ

ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಅವರ ಸಿಕ್ಕಿಂ ಭಾಷೆಯ ಚಿತ್ರ ಪಹುನಾದ ಮೊದಲ...
ಪಹುನಾ ಚಿತ್ರದ ಪೋಸ್ಟರ್
ಪಹುನಾ ಚಿತ್ರದ ಪೋಸ್ಟರ್
Updated on: 
 ಕ್ಯಾನ್ಸ್: ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಅವರ ಸಿಕ್ಕಿಂ ಭಾಷೆಯ ಚಿತ್ರ ಪಹುನಾದ ಮೊದಲ ನೋಟ ಫ್ರಾನ್ಸ್ ನ ಕ್ಯಾನ್ ನಲ್ಲಿ ನಡೆಯುತ್ತಿರುವ 70ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅನಾವರಣಗೊಂಡಿತು.
ಪ್ರಿಯಾಂಕಾ ಅವರು ಈ ಚಿತ್ರವನ್ನು ತಮ್ಮ ಮತ್ತು ತಮ್ಮ ತಾಯಿ ಮಧು ಚೋಪ್ರಾ ಅವರ ಬ್ಯಾನರ್ ಆದ ಪರ್ಪ್ ಲ್ ಪೆಬಲ್ ಪಿಕ್ಚರ್ಸ್ ಅಡಿ ನಿರ್ಮಿಸುತ್ತಿದ್ದಾರೆ.
ಪ್ರಿಯಾಂಕಾ ಅವರು ಚಿತ್ರದ ಟ್ರೇಲರ್ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಆದರೆ ಅವರ ತಾಯಿ ಮತ್ತು ಸಹೋದರ ಸಿದ್ಧಾರ್ಥ್ ಚೋಪ್ರಾ ಪಹುನಾದ ನಿನ್ನೆ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಚಿತ್ರವನ್ನು ಪಾಕ್ಹಿ ಎ.ತೈರೆವಾಲಾ ನಿರ್ದೇಶಿಸಿದ್ದಾರೆ. 
ಮೂವರು ನೇಪಾಳಿ ಮಕ್ಕಳ ಪ್ರೀತಿ, ಧೈರ್ಯ ಮತ್ತು ಸಾಹಸವನ್ನೊಳಗೊಂಡ ಚಿತ್ರ ಪಹುನಾ ಆಗಿದೆ. ಈ ಮಕ್ಕಳು ಪೋಷಕರಿಂದ ಬೇರ್ಪಟ್ಟು ಮಾವೋವಾದಿಗಳ ಸಮಸ್ಯೆಯಿರುವ ನೇಪಾಳದಿಂದ ಸಿಕ್ಕಿಂಗೆ ಓಡಿ ಹೋಗುತ್ತಾರೆ. ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರು ಮತ್ತು ಹಲವು ತಂತ್ರಜ್ಞರು ಸಿಕ್ಕಿಂನವರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com