ಕಂಗನಾ ರನೌತ್ ನನ್ನನ್ನು ಬೆಂಬಿಡದೆ ಹಿಂಸಿಸುತ್ತಿದ್ದಾರೆ: ಹೃತಿಕ್ ರೋಷನ್ ದೂರು

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರನೌತ್ ನಡುವಿನ ಜಗಳ ಮತ್ತೊಂದು ಹಂತಕ್ಕೆ ತಲುಪಿದೆ. ಕ್ವೀನ್ ನಟಿ ಕಂಗನಾ ....
ಹೃತಿಕ್ ರೋಷನ್-ಕಂಗನಾ ರನೌತ್
ಹೃತಿಕ್ ರೋಷನ್-ಕಂಗನಾ ರನೌತ್
Updated on: 
ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರನೌತ್ ನಡುವಿನ ಜಗಳ ಮತ್ತೊಂದು ಹಂತಕ್ಕೆ ತಲುಪಿದೆ. ಕ್ವೀನ್ ನಟಿ ಕಂಗನಾ ತಮ್ಮನ್ನು ಬೆಂಬಿಡದೆ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿ ಹೃತಿಕ್ ರೋಷನ್ 29 ಪುಟಗಳ ದೂರು ನೀಡಿದ್ದಾರೆ.
ಹೃತಿಕ್ ಪರ ವಕೀಲ ಮಹೇಶ್ ಜೇಠ್ಮಲಾನಿ ದೂರು ಸಲ್ಲಿಸಿದ್ದಾರೆ ಎಂದು ರಿಪಬ್ಲಿಕ್ ವರದಿ ಮಾಡಿದೆ.  ಹೃತಿಕ್ ರೋಷನ್ ತಮ್ಮ ಲ್ಯಾಪ್ ಟಾಪ್ ಮತ್ತು ಫೋನ್ ಗಳನ್ನೆಲ್ಲಾ ಪೊಲೀಸರಿಗೆ ಸಲ್ಲಿಸಿದ್ದು, ಕಂಗನಾ ತಮಗೆ ಲೈಂಗಿಕವಾಗಿ ಪ್ರಚೋದಿಸುವ ಇಮೇಲ್ ಗಳನ್ನು ಕಳುಹಿಸುತ್ತಿದ್ದರು ಮತ್ತು ತಮ್ಮನ್ನು ಶಾಶ್ವತ ಪ್ರೇಮಿಯೆಂದು ಸಂಬೋಧಿಸಿದ್ದರು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಜಂಟಿ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.
ಹೃತಿಕ್ ಸಲ್ಲಿಸಿದ ದೂರಿನಲ್ಲಿ, ಹೃತಿಕ್ ಮತ್ತು ಕಂಗನಾ 2009ರಿಂದ 2013ರವರೆಗೆ ತಮ್ಮಿಬ್ಬರ ಸಂಬಂಧ ಚಿತ್ರಗಳ ನಿರ್ಮಾಣ, ನಟನೆ ಮತ್ತು ಸಂಭ್ರಮಾಚರಣೆಗೆ ಸಂಬಂಧಿಸಿದ್ದಾಗಿತ್ತು ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕಂಗನಾ ತನಗೆ ಹೃತಿಕ್ ಮತ್ತು ಅವರ ತಂದೆ ರಾಕೇಶ್ ರೋಷನ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ಹೋರಾಟ ಇಲ್ಲಿಗೇ ನಿಂತಿಲ್ಲ. ಹೃತಿಕ್ ಮತ್ತು ಅವರ ತಂದೆ ತಮ್ಮ ಬಳಿ ಕ್ಷಮೆ ಕೋರಬೇಕೆಂದು ಕೆಲ ದಿನಗಳ ಹಿಂದೆ ಕಂಗನಾ ಹೇಳಿದ್ದರು.
ಕಂಗನಾ ಒಂದು ಸಂದರ್ಶನದ ವೇಳೆ ಹೃತಿಕ್ ರೋಶನ್ ತನ್ನ ಮಾಜಿ ಬಾಯ್ ಫ್ರೆಂಡ್ , ಮಾಜಿಗಳು ಏಕೆ ಗಮನ ಸೆಳೆಯಲು ಕ್ಷುಲ್ಲಕ ಕೆಲಸಗಳನ್ನು ಮಾಡುತ್ತಾರೆ ಎಂದು ಗೊತ್ತಾಗುವುದಿಲ್ಲ ಎಂದು ಹೇಳಿದ್ದರು. ಅಲ್ಲಿಂದ ಅವರಿಬ್ಬರ ನಡುವಿನ ಜಗಳ, ಪರಸ್ಪರ ಆರೋಪ, ಪ್ರತ್ಯಾರೋಪ ತಾರಕಕ್ಕೇರಿತ್ತು. ರಹಸ್ಯ ಇಮೇಲ್ ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ತಾವಿಬ್ಬರು ಜೊತೆಗಿದ್ದಾಗ ತೆಗೆದ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಂಗನಾ ಹೃತಿಕ್ ವಿರುದ್ಧ ದೂರು ನೀಡಿದ್ದರು.
ನಂತರ ಹೃತಿಕ್ ರೋಷನ್ ಕೂಡ ಸೈಬರ್ ಅಪರಾಧ ಕೇಂದ್ರದಲ್ಲಿ ಕಂಗನಾ ವಿರುದ್ಧ ದೂರು ನೀಡಿದ್ದರು.ಬೋಗಸ್ ಇಮೇಲ್ ಐಡಿಯಿಂದ ಕಂಗನಾಗೆ ನಕಲಿ ಇಮೇಲ್ ಕಳುಹಿಸಿ ತನಗೆ ತೇಜೋವಧೆ ಮಾಡುತ್ತಿದ್ದಾರೆ ಎಂದು ಹೃತಿಕ್ ಕೂಡ ದೂರು ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com