ಕೆಲಸಕ್ಕೆ ಮೊದಲ ಆದ್ಯತೆ, ಆದರೆ ಕುಟುಂಬ ಕೂಡ ಮುಖ್ಯ: ಕರೀನಾ ಕಪೂರ್

ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಚಮೇಲಿಯಂತಹ ಪಾತ್ರಗಳನ್ನು ನಿರ್ವಹಿಸಿದ್ದು, ಸೈಜ್ ಝೀರೋದಿಂದ ಖ್ಯಾತರಾಗಿದ್ದು, ಚಾಟ್ ಶೋಗಳಲ್ಲಿ ...
ದೆಹಲಿಯಲ್ಲಿ ನಿನ್ನೆ ಹನಿವೆಲ್ ಏರ್ ಪೂರಿಫೈಯರ್ ಉದ್ಘಾಟನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರೀನಾ ಕಪೂರ್
ದೆಹಲಿಯಲ್ಲಿ ನಿನ್ನೆ ಹನಿವೆಲ್ ಏರ್ ಪೂರಿಫೈಯರ್ ಉದ್ಘಾಟನೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರೀನಾ ಕಪೂರ್
ನವದೆಹಲಿ: ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಚಮೇಲಿಯಂತಹ ಪಾತ್ರಗಳನ್ನು ನಿರ್ವಹಿಸಿದ್ದು, ಸೈಜ್ ಝೀರೋದಿಂದ ಖ್ಯಾತರಾಗಿದ್ದು, ಚಾಟ್ ಶೋಗಳಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದು, ಗರ್ಭವತಿಯಾದ ನಂತರ ಮಗುವಿಗೆ ಜನ್ಮ ನೀಡುವವರೆಗೂ ಚುರುಕಾಗಿ ಕೆಲಸ ಮಾಡುತ್ತಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ತಮ್ಮದೇ ಸ್ವಂತಿಕೆಯ ಗುರುತನ್ನು ಹೊಂದಿದ್ದಾರೆ. 
ಗಂಡು ಮಗುವಿಗೆ ಈಗ ತಾಯಿಯಾಗಿರುವ ಕರೀನಾ, ಕೆಲಸ ತಮಗೆ ಆದ್ಯತೆಯಾಗಿದೆ ಆದರೆ ಕುಟುಂಬ ಕೂಡ ಮುಖ್ಯ ಎನ್ನುತ್ತಾರೆ.
ಕರೀನಾ ಪುತ್ರ ತೈಮುರ್ ಆಲಿ ಖಾನ್ ಗೆ ಈ ವರ್ಷದ ದೀಪಾವಳಿ ಮೊದಲ ಹಬ್ಬ. ವೀರ್ ದಿ ವೆಡ್ಡಿಂಗ್ ಚಿತ್ರದ ಶೂಟಿಂಗ್ ನಲ್ಲಿ ಕೂಡ ಕರೀನಾ ಭಾಗಿಯಾಗಿದ್ದಾರೆ. ಈ ಮಧ್ಯೆ ನವರಾತ್ರಿ, ದೀಪಾವಳಿ ಸಂದರ್ಭದಲ್ಲಿ ಕುಟುಂಬದ ಜೊತೆ ಕಾಲ ಕಳೆಯಲು ಕರೀನಾ ಹಿಂದೇಟು ಹಾಕುವುದಿಲ್ಲವಂತೆ. ಐಎಎನ್ಎಸ್ ಸುದ್ದಿ ಸಂಸ್ಥೆಗೆ ಇಮೇಲ್ ಮೂಲಕ ವಿಶೇಷ ಸಂದರ್ಶನ ನೀಡಿದ ಕರೀನಾ ಕಪೂರ್, ದೀಪಾವಳಿಗೆ ಮುನ್ನ ದೆಹಲಿಯಲ್ಲಿನ ಶೂಟಿಂಗ್ ನ್ನು ಮುಗಿಸುತ್ತೇವೆ. ಆಗ ದೀಪಾವಳಿ ಸಮಯದಲ್ಲಿ ಕುಟುಂಬದವರ ಜೊತೆ ಕಳೆಯಬಹುದು.
ಕೆಲಸ ನನ್ನ ಆದ್ಯತೆಯ ವಿಷಯವಾಗಿದೆ. ಆದರೆ ಕುಟುಂಬ ಕೂಡ ಮುಖ್ಯ ಎನ್ನುತ್ತಾರೆ ಈ ನಟಿ.
ಕರೀನಾ ಮತ್ತು ಸೈಫ್ ಆಲಿ ಖಾನ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ತೈಮುರ್ ಜನಿಸಿದ್ದ. ನನ್ನ ಮಗ ತೈಮುರ್ ಗೆ ಕುಟುಂಬದವರ ಜೊತೆ ಹೊರಗೆ ಹೋಗುವುದೆಂದರೆ ಬಲು ಪ್ರೀತಿ. ಈ ಬಾರಿಯ ಹಬ್ಬಕ್ಕೆ ಅವನಿಗೆ ಉಡುಗೊರೆಗಳನ್ನು ನೀಡುವುದಲ್ಲದೆ ಅವನಿಗೆ ಸಾಂಪ್ರದಾಯಿಕವಾಗಿ ಬಟ್ಟೆಗಳನ್ನು ತೊಡಿಸಬೇಕೆಂದಿದ್ದೇನೆ. ಸಿಹಿತಿಂಡಿಗಳೆಂದರೆ ಪಂಚಪ್ರಾಣ. ಹಬ್ಬದಲ್ಲಿ ಹಲವು ಸಿಹಿತಿನಿಸುಗಳನ್ನು ತಿಂದು ಖುಷಿಪಡಬಹುದು ಎಂದು ಭಾವಿಸುತ್ತೇನೆ ಎನ್ನುತ್ತಾರೆ.
ಹಬ್ಬಗಳೆಂದರೆ ತಿಂಡಿ-ತಿನಿಸುಗಳನ್ನು ತಿಂದುಕೊಂಡು ಚೆನ್ನಾಗಿ ಕಾಲ ಕಳೆಯುವುದು ಕೂಡ ಒಂದು ಭಾಗವಾಗಿದೆ. ಕಪೂರ್ ಮನೆತನದಿಂದ ಬಂದವರಾದ ಕರೀನಾ ಹಬ್ಬದ ಸಮಯದಲ್ಲಿ ತಿಂದು ಹೆಚ್ಚು ಮಾಡಿಕೊಂಡ ಕ್ಯಾಲೊರಿಗಳನ್ನು ಹೇಗೆ ತಗ್ಗಿಸಿಕೊಳ್ಳುತ್ತೀರಿ ಎಂದು ಕೇಳಿದಾಗ, ''ನನಗೆ ತಿನ್ನಬೇಕೆನಿಸಿದ್ದನ್ನೆಲ್ಲಾ ತಿನ್ನುತ್ತೇನೆ.ಹಾಗೆಂದು ನಂತರ ನಾನು ನಿತ್ಯದ ವ್ಯಾಯಾಮ, ಯೋಗ, ದೈಹಿಕ ಕಸರತ್ತನ್ನು ತಪ್ಪಿಸುವುದಿಲ್ಲ. ನಾನು ಸಾಕಷ್ಟು ನೀರು ಕುಡಿಯುತ್ತೇನೆ ಮತ್ತು ಮಿತವಾಗಿ ತಿನ್ನುತ್ತೇನೆ. ಕಾಲ ಬದಲಾದಂತೆ ಪ್ರತಿಯೊಬ್ಬರೂ ಬದಲಾಗುತ್ತಾ ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗುತ್ತಾರೆ. ನಮ್ಮಲ್ಲಿ ಜವಾಬ್ದಾರಿಯ ಭಾವನೆ ಮೂಡಿಸುತ್ತದೆ ಎಂದು ಕರೀನಾ ಹೇಳುತ್ತಾರೆ.
ಹಬ್ಬದ ಸಮಯದಲ್ಲಿ ಅವರ ಚರ್ಮದ ಕಾಳಜಿ ಮತ್ತು ಮೇಕಪ್ ಗಳೇನು ಎಂದು ಕೇಳಿದಾಗ, ಚರ್ಮದ ಕಾಳಜಿಗೆ ನಾನು ಮೂರು ಹಂತವನ್ನು ಅಳವಡಿಸಿಕೊಳ್ಳುತ್ತೇನೆ. ಹೈಡ್ರೇಟ್, ಪೋಷಣೆ ಮತ್ತು ವ್ಯಾಯಾಮ. ಹೊಸ ಲ್ಯಾಕ್ಮೆ ಅರ್ಗನ್ ನೈಟ್ ಸೆರಮ್ ಕೂಡ ಸೇರಿಸಿಕೊಳ್ಳುತ್ತೇನೆ ಎಂದು ಹಲವು ಬ್ಯೂಟಿ ಟಿಪ್ಸ್ ಗಳನ್ನು ನೀಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com