ಶ್ರೀದೇವಿ ಜನ್ಮದಿನ ಗೌರವಾರ್ಥ; ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಸಿನಿಮಾ ಪ್ರದರ್ಶನ

ರಾಷ್ಟ್ರಪ್ರಶಸ್ತಿ ಚಲನಚಿತ್ರ ಪ್ರಶಸ್ತಿ ಮತ್ತು ಪದ್ಮಶ್ರೀ ವಿಜೇತೆ ಶ್ರೀದೇವಿ ಅವರ ಗೌರವಾರ್ಥ ಅವರ ಚಿತ್ರಗಳ ...
ನಟಿ ಶ್ರೀದೇವಿ(ಸಂಗ್ರಹ ಚಿತ್ರ)
ನಟಿ ಶ್ರೀದೇವಿ(ಸಂಗ್ರಹ ಚಿತ್ರ)

ನವದೆಹಲಿ: ರಾಷ್ಟ್ರಪ್ರಶಸ್ತಿ ಚಲನಚಿತ್ರ ಪ್ರಶಸ್ತಿ ಮತ್ತು ಪದ್ಮಶ್ರೀ ವಿಜೇತೆ ಶ್ರೀದೇವಿ ಅವರ ಗೌರವಾರ್ಥ ಅವರ ಚಿತ್ರಗಳ ಆತ್ಮಾವಲೋಕನ ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನ ಪ್ರಯುಕ್ತ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಹಮ್ಮಿಕೊಂಡಿದೆ.

ಇಂದು ದೆಹಲಿಯ ಫಿಲ್ಮ್ ಡಿವಿಜನ್ ಸಭಾಂಗಣದಲ್ಲಿ ಕಾರ್ಯಕ್ರಮ ಆರಂಭವಾಗಿದೆ. ಕಳೆದ ವರ್ಷ ತೆರೆಕಂಡ ಶ್ರೀದೇವಿ ಅವರ ಮಾಮ್ ಚಿತ್ರ ಮೊದಲಿಗೆ ಪ್ರದರ್ಶಿಸಲಾಗುತ್ತದೆ. ಇದನ್ನು ನಿರ್ದೇಶಿಸಿದವರು ರವಿ ಉದಯ್ ಪುರ್. ನಂತರ ಲಮ್ಹೆ, ಮಿಸ್ಟರ್ ಇಂಡಿಯಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ನಾಳೆ ಇಂಗ್ಲಿಷ್ ವಿಂಗ್ಲಿಷ್, ಸಾದ್ಮ, ಚಾಂದಿನಿ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಇವೆಲ್ಲವೂ ಶ್ರೀದೇವಿಯವರ 5 ದಶಕಗಳಿಗೂ ಅಧಿಕ ಕಾಲದ ಸಿನಿವೃತ್ತಿಯಲ್ಲಿ ಯಶಸ್ಸು ಗಳಿಸಿದ ಚಿತ್ರಗಳು.

ಶ್ರೀದೇವಿಯವರು ಕೇವಲ 4 ವರ್ಷಗಳಿರುವಾಗ 1967ರಲ್ಲಿ ಬಾಲನಟಿಯಾಗಿ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ಶ್ರೀದೇವಿ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

54 ವರ್ಷದ ಶ್ರೀದೇವಿ ಕಳೆದ ಫೆಬ್ರವರಿ 24ರಂದು ದುಬೈಯಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದಾಗ ಉಳಿದುಕೊಂಡಿದ್ದ ಹೊಟೇಲ್ ನಲ್ಲಿ ಬಾತ್ ರೂಂ ಟಬ್ ನಲ್ಲಿ ಬಿದ್ದು ಮೃತಪಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com