ಸಾಮಾಜಿಕ ತಾಣದಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್

ತನ್ನ ವಿಂಕಿಂಗ್ ಹಾಗೂ ಕಣ್ ಸನ್ನೆಯ ಮೂಲಕ ನ್ಯಾಷನಲ್ ಸೆನ್ಸೇಷನ್ ಆದ ಮಲೆಯಾಳಂ ನಟಿ ಪ್ರಿಯಾ ವಾರಿಯರ್ ಸಾಮಾಜಿಕ ತಾಣಗಳಲ್ಲಿ ದಾಖಲೆ ಸಂಖ್ಯೆಯ ಬೆಂಬಲಿಗರನ್ನು ಪಡೆದಿದ್ದಾರೆ.
ಸಾಮಾಜಿಕ ತಾಣದಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್
ಸಾಮಾಜಿಕ ತಾಣದಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್
Updated on
ನವದೆಹಲಿ: ತನ್ನ ವಿಂಕಿಂಗ್ ಹಾಗೂ ಕಣ್ ಸನ್ನೆಯ ಮೂಲಕ ನ್ಯಾಷನಲ್ ಸೆನ್ಸೇಷನ್ ಆದ ಮಲೆಯಾಳಂ ನಟಿ  ಪ್ರಿಯಾ ವಾರಿಯರ್ ಸಾಮಾಜಿಕ ತಾಣಗಳಲ್ಲಿ ದಾಖಲೆ ಸಂಖ್ಯೆಯ ಬೆಂಬಲಿಗರನ್ನು ಪಡೆದಿದ್ದಾರೆ. ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ವಿಶ್ವ ಸುಂಡರಿ ಮಾನುಷಿ ಚಿಲ್ಲರ್ ಗಿಂತಲೂ ಹೆಚ್ಚಿನ ಫಾಲೋವರ್ಸ್ ಹೊಂದುವ ಮುಖೇನ ನೂತನ ದಾಖಲೆ ಬರೆದಿದ್ದಾರೆ.
ಪ್ರಿಯಾ 37 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದು ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನ ಹಿಂದಿಕ್ಕಿದ್ದಾರೆ. ಮಾನುಷಿ ಖಾತೆಗೆ 28 ಲಕ್ಷ ಪಾಲೋವರ್ಸ್ ಇದ್ದಾರೆ. ಎಂದರೆ ಪ್ರಿಯಾ ಅವರಿಗೆ ಚಿಲ್ಲಎರ್ ಗಿಂತಲೂ 9 ಲಕ್ಷ ಹೆಚ್ಚು ಫಾಲೋವರ್ಸ್ ಇದ್ದಾರೆ.
2017ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಜಯಿಸಿದ್ದ ಮಾನುಷಿ ಚಿಲ್ಲರ್ 17 ವರ್ಷದ ಬಳಿಕ ಭಾರತದವರೊಬ್ಬರು ವಿಶ್ವ ಸುಂದರಿಯಾಗಿ ಹೊರಹೊಮ್ಮುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಆದರೆ 'ಒರು ಆಡಾರ್ ಲವ್’ ಚಿತ್ರದ `ಮಾಣಿಕ್ಯಾ ಮಲರಾಯಾ ಪೂವಿ’ ಹಾಡಿನ ಮೂಲಕ ಪ್ರಸಿದ್ದಿ ಪಡೆದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇನ್ ಸ್ಟಾಗ್ರಾಮ್ ಖಾತೆಯನ್ನು ಒಂದು  ದಿನದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡುವ ಮುಖೇನ ಒಂದು ದಿನದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಪಡೆದ ಜಗತ್ತಿನ ಮೂರನೇ ಸೆಲೆಬ್ರಿಟಿ ಎನಿಸಿಕೊಂಡರು.  ಇದಕ್ಕೂ ಹಿಂದೆ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಈ ಸಾಧನೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com