ಬಾಲವುಡ್ ತಾರೆಯರನ್ನು ಭೇಟಿ ಮಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ

ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರು ಬಾಲವುಡ್ ತಾರೆಯರೊಂದಿಗೆ ಒಂದು ಸಂಜೆ ಕಳೆದಿದ್ದು...
ಶಾರುಖ್ ಖಾನ್ - ಸ್ಟಿನ್ ಟ್ರುಡ್ಯೂ
ಶಾರುಖ್ ಖಾನ್ - ಸ್ಟಿನ್ ಟ್ರುಡ್ಯೂ
ಮುಂಬೈ: ಭಾರತ ಪ್ರವಾಸದಲ್ಲಿರುವ  ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರು ಬಾಲವುಡ್ ತಾರೆಯರೊಂದಿಗೆ ಒಂದು ಸಂಜೆ ಕಳೆದಿದ್ದು, ಹಿಂದಿ ಹಾಗೂ ಕೆನಡಾ ಚಿತ್ರೋದ್ಯಮದ ಸಂಬಂಧ ಗಟ್ಟಿಗೊಳಿಸುವ ಬಗ್ಗೆ ಚರ್ಚಿಸಿದ್ದಾರೆ.
ಜಸ್ಟಿನ್ ಟ್ರುಡ್ಯೂ ಅವರು ಮಂಗಳವಾರ ರಾತ್ರಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ಹಿರಿಯ ನಟ ಅನುಪಮ್ ಖೇರ್ ಹಾಗೂ ನಟ ಫರಾನ್ ಅಖ್ತರ್ ಅವರನ್ನು ಭೇಟಿ ಮಾಡಿದ್ದು, ಶಾರುಖ್ ಖಾನ್ ರೊಂದಿಗಿನ ತಮ್ಮ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಇನ್ನು ಅನುಪಮ್ ಖೇರ್ ಅವರು ಸಹ  ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದ್ದು, ಅವರೊಂದಿಗಿನ ಫೋಟೋಗಳನ್ನು ಟ್ವೀಟ್ ಮಾಡಿ, ಅದೊಂದು ಸಂತೋಷದ ಕ್ಷಣವಾಗಿತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com