ಬಾಳ್ ಠಾಕ್ರೆ ಜೀವನ ಚರಿತ್ರೆ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಹೇಗೆ ಕಾಣಿಸ್ತಾರೆ ಗೊತ್ತಾ? ಈ ಫೋಟೊ ನೋಡಿ

ಶಿವಸೇನೆಯ ಮುಖ್ಯಸ್ಥರಾಗಿದ್ದ ಬಾಳಾಸಾಹೇಬ್ ಠಾಕ್ರೆ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ತೆರೆ ಮೇಲೆ ಬರುತ್ತಿದ್ದು, ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಠಾಕ್ರೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನವಾಜುದ್ದೀನ್ ಸಿದ್ದಿಕಿ
ನವಾಜುದ್ದೀನ್ ಸಿದ್ದಿಕಿ
Updated on: 
ನವದೆಹಲಿ: ಶಿವಸೇನೆಯ ಮುಖ್ಯಸ್ಥರಾಗಿದ್ದ ಬಾಳಾಸಾಹೇಬ್ ಠಾಕ್ರೆ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ತೆರೆ ಮೇಲೆ ಬರುತ್ತಿದ್ದು, ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಠಾಕ್ರೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. 
ಸಿನಿಮಾ ಘೋಷಣೆಯಾದಾಗಿನಿಂದಲೂ ಈ ಚಿತ್ರ ಸುದ್ದಿಯಲ್ಲಿದೆ. ಈಗಲೂ ಈ ಸಿನಿಮಾದ ಫೋಟೊ ಸದ್ದು ಮಾಡುತ್ತಿದ್ದು, ನವಾಜುದ್ದೀನ್ ಸಿದ್ದಿಕಿ ಬಾಳಾ ಸಾಹೇಬ್ ಠಾಕ್ರೆಯ ಪಾತ್ರದಲ್ಲಿ ತಯಾರಾಗಿರುವುದನ್ನು ಸಿನಿಮಾ ವಿಮರ್ಶಕ, ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಸಿದ್ದಿಕಿ ಬಾಳ್ ಠಾಕ್ರೆ ಅವರ ರೀತಿಯಲ್ಲೇ ಕಾಣುತ್ತಿದ್ದಾರೆ.  
2019 ರ ಜನವರಿ 23 ರಂದು ಬಿಡುಗಡೆಯಾಗಲಿರುವ ಸಿನಿಮಾಗೆ ಶಿವಸೇನೆಯ ರಾಜ್ಯಸಭಾ ಸದಸ್ಯ, ಶಿವಸೇನೆಯ ವಕ್ತಾರ ಸಂಜಯ್ ರಾವುತ್ ಚಿತ್ರಕಥೆ ಬರೆದಿದ್ದು, ಕಾರ್ನಿವಲ್ ಮೋಷನ್ ಪಿಕ್ಚರ್ಸ್ ಜೊತೆಗೂಡಿ ನಿರ್ಮಾಣವನ್ನೂ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com