ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಹಾಡಿ ಹೊಗಳಿದ್ದಾರೆ.
ಅನುಷ್ಕಾ ಶರ್ಮಾ ಅಭಿನಯದ ಹಾರರ್ ಸಿನಿಮಾ ಪರಿ ಇಂದು ಬಿಡುಗಡೆಯಾಗಿದ್ದು, ಕೊಹ್ಲಿ ಚಿತ್ರವನ್ನ ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ಇದು ನನ್ನ ಹೆಂಡತಿ ಮಾಡಿರುವ ಅತ್ಯುತ್ತಮ ಚಿತ್ರ ಎಂದು ಕೊಹ್ಲಿ ಅನುಷ್ಕಾ ಶರ್ಮಾ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರೋ ವಿರಾಟ್ ಕೊಹ್ಲಿ, ಕಳೆದ ರಾತ್ರಿ ಪರಿ ಸಿನಿಮಾ ನೋಡಿದೆ. ಇದು ಈವರೆಗಿನ ನನ್ನ ಹೆಂಡತಿಯ ಅತ್ಯುತ್ತಮ ಚಿತ್ರ. ನಾನು ದೀರ್ಘ ಸಮಯದ ಬಳಿಕ ನೋಡಿದ ಉತ್ತಮ ಚಿತ್ರ. ಸ್ವಲ್ಪ ಹೆದರಿಕೆ ಆಯ್ತು. ಆದರೂ ನಿನ್ನ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪರಿ ಚಿತ್ರ ಭಯ ಹುಟ್ಟಿಸುವಂತಹ ಟ್ರೇಲರ್ ಹಾಗೂ ಪೋಸ್ಟರ್‍ಗಳಿಂದಲೇ ಸಾಕಷ್ಟು ನಿರೀಕ್ಷೆಯನ್ನ ಹುಟ್ಟಿಸಿತ್ತು. ಈ ಚಿತ್ರವನ್ನ ಪ್ರೋಸಿತ್ ರಾಯ್ ನಿರ್ದೇಶಿಸಿದ್ದು, ಅನುಷ್ಮಾ ಶರ್ಮಾ ಅವರ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಹಾಗೂ ಕ್ರಿಆರ್ಜ್ ಎಂಟರ್‍ಟೈನ್‍ಮೆಂಟ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣ ಮಾಡಲಾಗಿದೆ.