ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ 'ರೇಸ್ 3' ಪೋಸ್ಟರ್ ಬಿಡುಗಡೆ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಯನದ ಬಹುನಿರೀಕ್ಷಿತ ರೇಸ್ 3 ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಯನದ ಬಹುನಿರೀಕ್ಷಿತ ರೇಸ್ 3 ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ. ರೇಸ್ 3 ಚಿತ್ರದಲ್ಲಿ ಸಿಕಂದರ್ ಪಾತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸಿದ್ದು, ಟ್ವಿಟರ್ ನಲ್ಲಿ ಫಸ್ಟ್  ಲುಕ್ ನ್ನು ಅನಾವರಣಗೊಳಿಸಿದ್ದಾರೆ.

ನನ್ನ ಹೆಸರು ಸಿಕಂದರ್. ರೇಸ್ 3 ಕುಟುಂಬದೊಂದಿಗೆ  ನಿಮ್ಮನ್ನು ಭೇಟಿಯಾಗುತ್ತಿದ್ದೇನೆ ಎಂದು ಸಲ್ಮಾನ್ ಖಾನ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ರೇಮೊ ಡಿಸೋಜಾ ಈ ಚಿತ್ರದ ನಿರ್ದೇಶಕರು ಹಾಗೂ ಛಾಯಾಗ್ರಾಹಕರಾಗಿದ್ದಾರೆ. ಜೂನ್  ತಿಂಗಳ ಈದ್ ಮಿಲಾದ್ ಗೆ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ.

ಜಾಕ್ವೆಲಿನ್ ಫರ್ನಾಂಡೀಜ್, ಬೊಬಿ ಡಿಯೊಲ್, ಡೈಸಿ ಶಾ, ಅನಿಲ್ ಕಪೂರ್ ಮತ್ತು ಸಕೀಬ್ ಅಲೀಮ್  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಸೈಫ್ ಆಲಿಖಾನ್ ಮುಖ್ಯಪಾತ್ರ ನಿರ್ವಹಿಸಿದ್ದಾರೆ. ಆದರೆ ಮೂರನೇ ಹಂತದಲ್ಲಿ 52 ವರ್ಷದ ಸಲ್ಮಾನ್ ಖಾನ್  ಮೂಲಕ  ಚಿತ್ರಕ್ಕೆ ತಿರುವು ನೀಡಲಾಗಿದೆ.

ನಿರ್ದೇಶಕ ಅಬ್ಬಾಸ್ ಮುಸ್ತಾನ್ ಅವರಿಂದ ಈ ಚಿತ್ರವನ್ನು ರೇಮೊ ಡಿಸೋಜಾ ಪಡೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com