ಕ್ಯಾನೆ ಚಿತ್ರೋತ್ಸವ: ದಿವಂಗತ ನಟಿ ಶ್ರೀದೇವಿಗೆ ಗೌರವ

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನ ಕ್ಯಾನೆಯಲ್ಲಿ ನಡೆಯುತ್ತಿರುವ 71 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗದ ನಟಿ ಶ್ರೀದೇನಿ ಅವರನ್ನು ಗೌರವಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನ ಕ್ಯಾನೆಯಲ್ಲಿ ನಡೆಯುತ್ತಿರುವ 71 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗದ ನಟಿ ಶ್ರೀದೇನಿ ಅವರನ್ನು ಗೌರವಿಸಲಾಗಿದೆ.
ಕ್ಯಾನೆ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗಕ್ಕೆ ನಟಿ ಶ್ರೀದೇವಿ ಅವರ ಸಲ್ಲಿಸಿರುವ ಗಣನೀಯ ಸೇನೆಯನ್ನು ನೆನಪಿಸಿಕೊಳ್ಳಲಾಗಿದ್ದು, ಅವರಿಗೆ ಗೌರವ ಸಲ್ಲಿಸಲಾಯಿತು. ಇನ್ನು ಇದೇ ಚಿತ್ರೋತ್ಸವದಲ್ಲಿ ಶ್ರೀದೇವಿ ಅವರ ಪತಿ ಬೋನಿಕಪೂರ್ ಹಾಗೂ ಅವರ ಪುತ್ರಿಯರಾದ ಜಾಹ್ನವಿ ಕಪೂರ್ ಹಾಗೂ ಖುಷಿ ಕಪೂರ್ ಕೂಡ ಪಾಲ್ಗೊಂಡಿದ್ದಾರೆ. ಇನ್ನು ಅಂತೆಯೇ ಇದೇ ಚಿತ್ರೋತ್ಸವದಲ್ಲಿ ಶ್ರೀದೇವಿ ಅವರ ಕೊನೆಯ ಚಿತ್ರ 'ಮಾಮ್' ಕೂಡ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.
ಈ ವೇಳೆ ನಟಿ ಶ್ರೀದೇವಿ ಕುರಿತು ಮಾತನಾಡಿದ ಪತಿ ಬೋನಿ ಕಪೂರ್, ದೈಹಿಕವಾಗಿ ಶ್ರೀದೇವಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಆಕೆಯ ನೆನಪು ಸದಾನಮ್ಮೊಂದಿಗೆ ಇರುತ್ತದೆ. ಆಕೆ ಚಿತ್ರರಂಗಕ್ಕೆ ಮಾಡಿರುವ ಸೇವೆಯೇ ಚಿತ್ರರಂಗ ಆಕೆಯನ್ನು ಶಾಶ್ವತವಾಗಿ ನೆನಪಿಸಿಕೊಳ್ಳುವಂತೆ ಮಾಡಿದೆ ಎಂದು ಹೇಳಿದರು.
ಭಾರತದ ಮೊಟ್ಟದ ಮೊದಲ ಮಹಿಳಾ ಸೂಪರ್ ಸ್ಟಾರ್ ನಟಿ ಶ್ರೀದೇವಿ ಕಳೆದ ಫೆಬ್ರವರಿ 24ರಂದು ದುಬೈನಲ್ಲಿ ನಿಧನರಾಗಿದ್ದರು. ಸಂಬಂಧಿಯೊಬ್ಬರ ವಿವಾಹದಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀದೇವಿ ಅವರ ಮೃತದೇಹ ಬಾತ್ ರೂಮ್ ನ ಟಬ್ ನಲ್ಲಿ ಬಿದ್ದಿತ್ತು. 
ಇನ್ನು ಕ್ಯಾನೆ ಚಿತ್ರೋತ್ಸವದಲ್ಲಿ ನಟಿ ಶ್ರೀದೇವಿ ಅಲ್ಲದೆ, ದಿವಂಗತ ನಟ ಶಶಿಕಪೂರ್, ಖ್ಯಾತ ಹಾಲಿವುಡ್ ನಟರಾದ ಜಾನ್ ಹಾರ್ಡ್, ಟೋನಿ ಆನ್ನಿ ವಾಕರ್, ಜೇನ್ ಫೋರೆ, ರಾಬರ್ಟ್ ಆಸ್ಬರ್ನ್, ಮಾರ್ಟಿನ್ ಲಾಡಾವ್ ಸೇರಿದಂತೆ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಹಲವರನ್ನು ಸ್ಮರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com