ವಾಷಿಂಗ್ ಪೌಡರ್ ನಿರ್ಮಾ ಗರ್ಲ್ ಆದ ನಟಿ ಸ್ವರ ಭಾಸ್ಕರ್!

ವೆರೆ ಡಿ ವೆಡ್ಡಿಂಗ್ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸ್ವರ ಭಾಸ್ಕರ್ ತೊಟ್ಟಿದ್ದ ಉಡುಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಸ್ವರ ಭಾಸ್ಕರ್
ಸ್ವರ ಭಾಸ್ಕರ್
ವೆರೆ ಡಿ ವೆಡ್ಡಿಂಗ್ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸ್ವರ ಭಾಸ್ಕರ್ ತೊಟ್ಟಿದ್ದ ಉಡುಗೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. 
ದುಬೈ ಮೂಲದ ಡಿಸೈನರ್ ಅಟೆಲಿಯರ್ ಝುಹ್ರಾ ವಿನ್ಯಾಸಗೊಳಿಸಿದ್ದ ವಸ್ತ್ರವನ್ನು ಧರಿಸಿದ್ದ ನಟಿ ಸ್ವರ ಭಾಸ್ಕರ್, ಥೇಟ್ ವಾಷಿಂಗ್ ಪೌಡರ್ ನಿರ್ಮಾ ಗರ್ಲ್ ರೀತಿಯಲ್ಲೇ ಕಾಣಿಸುತ್ತಿದ್ದರು. ಇದನ್ನು ಗಮನಿಸಿರುವ ಸಾಮಾಜಿಕ ಜಾಲತಾಣಿಗರು ವಾಷಿಂಗ್ ಪೌಡರ್ ನಿರ್ಮಾ ಜಾಹಿರಾತಿನಲ್ಲಿ ಬರುವ ಹುಡುಗಿಯನ್ನೇ ಹೋಲುತ್ತಿದ್ದು ವಾಷಿಂಗ್ ಪೌಡರ್ ನಿರ್ಮಾ ಗರ್ಲ್ ಎಂದು ಟ್ರೋಲ್ ಮಾಡಿದ್ದಾರೆ. 
ವೆರೆ ಡಿ ವೆಡ್ಡಿಂಗ್ ಚಿತ್ರವನ್ನು ಅನಿಲ್ ಕಪೂರ್ ಫಿಲ್ಮ್ಸ್ ನಿರ್ಮಾಣ ಮಾಡಿದ್ದು, ಕರೀನಾ ಕಪೂರ್, ಸೋನಮ್ ಕಪೂರ್ ಮತ್ತು ಶಿಖಾ ತಲ್ಸಾನಿಯಾ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com