'ಸಂಜು' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ, ಸುನಿಲ್ ದತ್ ಪಾತ್ರದಲ್ಲಿ ಪರೇಶ್ ರಾವಲ್

ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ 'ಸಂಜು' ಚಿತ್ರದ ಮತ್ತೊಂದು ಪೋಸ್ಟರ್ ಭಾನುವಾರ ಬಿಡುಗಡೆಯಾಗಿದ್ದು, ...
ಹೊಸ ಪೋಸ್ಟರ್
ಹೊಸ ಪೋಸ್ಟರ್
ನವದೆಹಲಿ: ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ 'ಸಂಜು' ಚಿತ್ರದ ಮತ್ತೊಂದು ಪೋಸ್ಟರ್ ಭಾನುವಾರ ಬಿಡುಗಡೆಯಾಗಿದ್ದು, ನಟ ಹಾಗೂ ಬಿಜೆಪಿ ಸಂಸದ ಪರೇಶ್ ರಾವಲ್ ಅವರು ಸುನಿಲ್ ದತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹೊಸ ಪೋಸ್ಟರ್ ನಲ್ಲಿ ಪರೇಶ್ ರಾವಲ್ ಅವರು ಸಂಜಯ್ ದತ್ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟ ರಣ್ ಬೀರ್ ಕಪೂರ್ ಅವರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ತಂದೆ-ಮಗನ ಸಂಬಂಧ  ಹೇಗಿರಲಿದೆ ಎಂಬುದು ಈ ಪೋಸ್ಟರ್ ಮೂಲಕ ರಿವೀಲ್ ಆಗಿದೆ. ನಿರ್ದೇಶಕ ರಾಜ್ ಕುಮಾರ್ ಇರಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
ರಣಬೀರ್ ಕಪೂರ್ ಹಾಗೂ ಸೋನಮ್ ಕಪೂರ್ ಅಭಿನಯದ 'ಸಂಜು' ಚಿತ್ರದ ಟ್ರೇಲರ್ ಮೇ 30ಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾ ಜೂನ್ 29ಕ್ಕೆ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com