ತನಗಿಂತ 15 ವರ್ಷ ಚಿಕ್ಕವನಾದ ರೋಹ್ಮನ್ ಶಾಲ್ ಜತೆ ಸುಷ್ಮಿತಾ ಸೇನ್ ಮದುವೆ?

ಬಾಲಿವುಡ್ ನಟಿ ಸುಷ್ಮಿತಾ ಸೇನ್ ಇತ್ತೀಚೆಗೆ ತನ್ನೆಲ್ಲಾ ಸಮಯವನ್ನು ತನ್ನ ಮಕ್ಕಳು ಹಾಗೂ ತನಗಿಂತ 15 ವರ್ಷಕ್ಕಿಂತ ಕಿರಿಯ ತನ್ನ ಪ್ರಿಯಕರ ರೋಹ್ಮನ್ ಶಾಲ್ ಸುತ್ತಾಡುತ್ತಿದ್ದು ಸುದ್ದಿಗೆ ಗ್ರಾಸವಾಗಿದ್ದಾರೆ...
ಸುಷ್ಮಿತಾ ಸೇನ್-ರೋಹ್ಮನ್ ಶಾಲ್
ಸುಷ್ಮಿತಾ ಸೇನ್-ರೋಹ್ಮನ್ ಶಾಲ್
Updated on
ನವದೆಹಲಿ: ಬಾಲಿವುಡ್ ನಟಿ ಸುಷ್ಮಿತಾ ಸೇನ್ ಇತ್ತೀಚೆಗೆ ತನ್ನೆಲ್ಲಾ ಸಮಯವನ್ನು ತನ್ನ ಮಕ್ಕಳು ಹಾಗೂ ತನಗಿಂತ 15 ವರ್ಷಕ್ಕಿಂತ ಕಿರಿಯ ತನ್ನ ಪ್ರಿಯಕರ ರೋಹ್ಮನ್ ಶಾಲ್ ಸುತ್ತಾಡುತ್ತಿದ್ದು ಸುದ್ದಿಗೆ ಗ್ರಾಸವಾಗಿದ್ದಾರೆ. 
ಸುಷ್ಮಿತಾ ಸೇನ್ ರೋಹ್ಮನ್ ಶಾಲ್ ರನ್ನು ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಈ ಜೋಡಿ ಹಲವು ಖಾಸಗಿ ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 
ಸುಷ್ಮಿತಾ ಸೇನ್ ತನ್ನ ಮಕ್ಕಳಾದ ರೀನೇ ಹಾಗೂ ಅಲಿಶಾ ಹಾಗೂ ಪ್ರಿಯಕರ ರೋಹ್ಮನ್ ಶಾಲ್ ಜತೆ ಕಾಣಿಸಿಕೊಂಡಿರುವ ಫೋಟೋವನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶೇರ್ ಮಾಡಿದ್ದಾರೆ. 
ಮೂಲಗಳ ಪ್ರಕಾರ, ಈ ಜೋಡಿ ಮುಂದಿನ ವರ್ಷ ಚಳಿಗಾಲದಲ್ಲಿ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 
ಕೆಲ ದಿನಗಳ ಹಿಂದಷ್ಟೇ ರೋಹ್ಮನ್ ಜೊತೆಗೆ ವ್ಯಾಯಾಮ ಮಾಡುತ್ತಿದ್ದ ಫೋಟೋ ಹಾಕಿದ್ದರು.
View this post on Instagram

#duggadugga ❤️

A post shared by Sushmita Sen (@sushmitasen47) on

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com