'ಬಿಕ್ಕಿ ಬಿಕ್ಕಿ ಅತ್ತಿದ್ದ ಶ್ರೀಶಾಂತ್' ಪತ್ನಿ ಭುವನೇಶ್ವರಿ ಬಿಗ್‍ಬಾಸ್‍ಗೆ ಧನ್ಯವಾದ ಹೇಳಿದ್ದೇಕೆ?

ಬಿಸಿಸಿಐನಿಂದ ನಿಷೇಧಗೊಂಡಿರುವ ಮಾಜಿ ವೇಗಿ ಶ್ರೀಶಾಂತ್ ಸದ್ಯ ಹಿಂದಿಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಪ್ರತಿ ಸ್ಪರ್ಧಿಗಳ ಜತೆಗಿನ ಜಗಳಗಳ ಮೂಲಕ ಶ್ರೀಶಾಂತ್ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ...
ಶ್ರೀಶಾಂತ್, ಭುವನೇಶ್ವರಿ ಕುಮಾರಿ
ಶ್ರೀಶಾಂತ್, ಭುವನೇಶ್ವರಿ ಕುಮಾರಿ
ಬಿಸಿಸಿಐನಿಂದ ನಿಷೇಧಗೊಂಡಿರುವ ಮಾಜಿ ವೇಗಿ ಶ್ರೀಶಾಂತ್ ಸದ್ಯ ಹಿಂದಿಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಪ್ರತಿ ಸ್ಪರ್ಧಿಗಳ ಜತೆಗಿನ ಜಗಳಗಳ ಮೂಲಕ ಶ್ರೀಶಾಂತ್ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ. 
ತಮ್ಮ ಸ್ವಭಾವದಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ಶ್ರೀಶಾಂತ್ ಕೆಲವೊಮ್ಮೆ ಭಾವನ್ಮಾಕತೆಗೆ ಒಳಗಾಗುತ್ತಿದ್ದರು. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಿಂದಾಗಿ ತಿಹಾರ್ ಜೈಲು ಸೇರಿದ್ದ ಘಟನೆಯನ್ನು ಶ್ರೀಶಾಂತ್ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದರು. ಈ ವೇಳೆ ದುಃಖಿತರಾಗಿದ್ದ ಶ್ರೀಯನ್ನು ಬಿಗ್ ಬಾಗ್ ಕನ್ಫೆಷನ್ ರೂಂಗೆ ಕರೆಸಿದ್ದರು. ಅಲ್ಲಿ ಶ್ರೀಶಾಂತ್ ತಮ್ಮ ನೋವನ್ನು ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದರು. 
ಅಲ್ಲಿ ಶ್ರೀಶಾಂತ್ ಗೆ ಬಿಗ್ ಬಾಸ್ ಜೀವನ ಪಾಠ ಹೇಳಿದ್ದರು. ಜೀವನದಲ್ಲಿ ಕಷ್ಟಗಳು ಬರುತ್ತಿರುತ್ತವೆ. ಅದನ್ನೆಲ್ಲಾ ದೃಢವಾಗಿ ಎದುರಿಸಬೇಕು ಎಂದೆಲ್ಲಾ ಹೇಳಿ ಸಾಂತ್ವಾನದ ಮಾತುಗಳನ್ನು ಆಡಿದ್ದರು. ಇದಕ್ಕೆ ಶ್ರೀಶಾಂತ್ ಪತ್ನಿ ಭುವನೇಶ್ವರಿ ಕುಮಾರಿ ಟ್ವೀಟ್ ಮಾಡಿ ಬಿಗ್ ಬಾಸ್ ಗೆ ಧನ್ಯವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com