ಬಾಲಿವುಡ್ ನಟಿ ನೇಹಾ ಧುಪಿಯಾ, ಅಂಗದ್ ಬೇಡಿ ದಂಪತಿಗೆ ಹೆಣ್ಣು ಮಗು ಜನನ

ಮದುವೆಯಾಗಿ ಆರು ತಿಂಗಳಿಗೆ ಬಾಲಿವುಡ್ ನಟಿ ನೇಹಾ ಧುಪಿಯಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ...
ಅಂಗದ್ ಬೇಡಿ-ನೇಹಾ ಧುಪಿಯಾ
ಅಂಗದ್ ಬೇಡಿ-ನೇಹಾ ಧುಪಿಯಾ
ಮುಂಬೈ: ಬಾಲಿವುಡ್ ನಟಿ ನೇಹಾ ಧುಪಿಯಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 
ಬಹುಕಾಲದ ಗೆಳೆಯ ಅಂಗದ್ ಬೇಡಿಯನ್ನು ನೇಹಾ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ದೆಹಲಿಯ ಗುರುದ್ವಾರದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಕೆಲವೇ ತಿಂಗಳಲ್ಲಿ ಅಂಗದ್ ತಮ್ಮ ಪತ್ನಿ ನೇಹಾ ಗರ್ಭೀಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ನೇಹಾ ಮದುವೆಯಾದ ಕೆಲವೇ ತಿಂಗಳಲ್ಲಿ ಅವರು ಗರ್ಭಿಣಿಯಾಗಿದ್ದಾರೆ ಎಂಬ ಗಾಸಿಪ್ ಸಹ ಹಬ್ಬಿತ್ತು. ನಂತರ ಇಬ್ಬರು ತಮ್ಮ ಇನ್ ಸ್ಟಾಗ್ರಾಂನಲ್ಲಿ ನೇಹಾ ಗರ್ಭಿಣಿಯಿರುವ ಫೋಟೋ ಹಾಕಿದ್ದರು. 
ಇದೀಗ ನಿನ್ನೆ ನೇಹಾ ಧುಪಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಬಾಲಿವುಡ್ ನ ಹಲವು ತಾರೆಯರು ಶುಭಾ ಹಾರೈಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com