ಎಲ್ಲರೂ ನನ್ನ ಮರೆತರೂ, ಸಚಿನ್ ಮರೆಯಲಿಲ್ಲ: ಬಿಗ್‌ಬಾಸ್‌ ಮನೆಯಲ್ಲಿ ಕಣ್ಣೀರು ಹಾಕಿದ ಶ್ರೀಶಾಂತ್!

ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಶ್ರೀಶಾಂತ್ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‌ಬಾಸ್‌ ನ ಸ್ಪರ್ಧಿಯಾಗಿದ್ದು...
ಸಚಿನ್ ತೆಂಡೂಲ್ಕರ್-ಶ್ರೀಶಾಂತ್
ಸಚಿನ್ ತೆಂಡೂಲ್ಕರ್-ಶ್ರೀಶಾಂತ್
ಮುಂಬೈ: ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಶ್ರೀಶಾಂತ್ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ನ ಸ್ಪರ್ಧಿಯಾಗಿದ್ದು ಈ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಗ್ಗೆ ರಹಸ್ಯವೊಂದನ್ನು ಬಹಿರಂಗಪಡಿಸಿ ಕಣ್ಣೀರು ಹಾಕಿದ್ದಾರೆ. 
ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳ ಜತೆ ಮಾತನಾಡುವಾಗ ಶ್ರೀಶಾಂತ್ ಹಿಂದೊಮ್ಮೆ ತಮಗೆ ಸಚಿನ್ ಸಹಾಯ ಮಾಡಿದ್ದನ್ನು ಸ್ಮರಿಸಿಕೊಂಡಿದ್ದಾರೆ. 2011ರ ವಿಶ್ವಕಪ್ ಗೆಲುವಿನ ನಂತರ ತಂಡದ ಸಂದರ್ಶನವೊಂದರಲ್ಲಿ ಎಲ್ಲರ ಸಾಧನೆಯನ್ನೂ ಸ್ಮರಿಸಲಾಯಿತು. ಎಲ್ಲಾ ಆಟಗಾರರನ್ನು ಕೊಂಡಾಡಿದ್ದರು. 
ಆದರೆ ಈ ವೇಳೆ ನನ್ನ ಹೆಸರನ್ನು ಬಿಟ್ಟಿದ್ದರು. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಅವರು ನನ್ನ ಹೆಸರನ್ನು ಪ್ರತ್ಯೇಕವಾಗಿ ಹೇಳಿ ಗೆಲುವಿನಲ್ಲಿ ನನ್ನ ಪಾತ್ರ ದೊಡ್ಡದು ಎಂದಿದ್ದರು. ಆ ವೇಳೆ ಅವರ ಮಾತುಗಳನ್ನು ಕೇಳಿ ನನಗೆ ಅಳುವೇ ಬಂದಿತ್ತು ಎಂದು ಶ್ರೀಶಾಂತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com