ಕನ್ನಡದಲ್ಲಿ ದೀಪಿಕಾ ಪಡುಕೋಣೆ ಅವರನ್ನು ಪರಿಚಯಿಸಿದ್ದ ಇಂದ್ರಜಿತ್ ಲಂಕೇಶ್ ಈಗ ಹಿಂದಿ ಸಿನಿಮಾದಲ್ಲಿ ರಿಚಾ ಚಡ್ಡ ಅವರನ್ನು ಪರಿಚಯಿಸುತ್ತಿದ್ದು, "ನನ್ನ ಸಿನಿ ಜೀವನದಲ್ಲಿ ಅತ್ಯಂತ ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ ಆಗಿದೆ" ಎಂದು ಹೇಳಿದ್ದಾರೆ. ಸೆ.22 ರಂದು ಜನ್ಮದಿನವನ್ನಾಚರಿಸಿಕೊಳ್ಳುತ್ತಿರುವ ಇಂದ್ರಜಿತ್ ಲಂಕೇಶ್, ತಮ್ಮ ತಂದೆ ಪಿ.ಲಂಕೇಶ್ ಅವರ ಕುರಿತ ಪುಸ್ತಕವನ್ನು ಸಿದ್ಧಗಂಗಾ ಮಠದಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ನೀಡಲಿದ್ದಾರೆ.