ಮುಂಬೈ: ಸದಾ ವಿವಾದಾತ್ಮಕ ಹೇಳಿಕೆ ಮೂಲಕವೇ ಸುದ್ದಿಯಾಗುವ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಅವರು ಈಗ ಎಲ್ಲರ ಹುಬ್ಬೇರಿಸುವಂತಹ ಹೇಳಿಕೆ ನೀಡಿದ್ದಾರೆ.
ಹೌದು ಮಾದಕ ನಟಿ ರಾಖಿ ಸಾವಂತ್, ಪ್ರೀತಿ ಹಂಚುವುದಕ್ಕಾಗಿ ತನ್ನ ಸ್ತನವನ್ನು ದಾನ ಮಾಡುವ ಬಯಕೆ ಹೊಂದಿರುವುದಾಗಿ ಘೋಷಣೆ ಮಾಡಿದ್ದಾಳೆ!
ಕೆಲ ವರ್ಷಗಳ ಹಿಂದೆ ಬಾಲಿವುಡ್ ನಟ ಐಶ್ವರ್ಯ ರೈ ಬಚ್ಚನ್ ಅವರು, ಭಾರತೀಯ ನೇತ್ರ ಬ್ಯಾಂಕ್ ಸಂಘಕ್ಕೆ ಕಣ್ಣು ದಾನ ಮಾಡುವುದಾಗಿ ಘೋಷಿಸಿದ್ದರು. ಐಶ್ವರ್ಯ ಅವರ ಈ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸಿದ ರಾಖಿ, ತಾನು ತನ್ನ ಸ್ತನವನ್ನು ದಾನ ಮಾಡುವುದಾಗಿ ಹೇಳಿದ್ದಾರೆ.
ಜನರು ತಮ್ಮ ಅಂಗಾಂಗಳನ್ನು ದಾನ ಮಾಡುವ ಮೂಲಕ ಮಹತ್ತರವಾದ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ನಟಿಯಾದ ನಾನು ಸಹ ಯಾಕೆ ಈ ನಿರ್ಧಾರ ಅನುಸರಿಸಬಾರದು ಎಂದಿರುವ ರಾಖಿ ಸಾವಂತ್, ತಾನು ತನ್ನ ಸ್ತನವನ್ನು ದಾನ ಮಾಡುವ ಮೂಲಕ ಸಮಾಜ ಸೇವೆ ಹಾಗೂ ಪ್ರೀತಿ ಹಂಚುವುದಾಗಿ ಹೇಳಿದ್ದಾರೆ. ರಾಖಿಯ ವಿಡಿಯೋ ಇದೀಗ ವೈರಲ್ ಆಗಿದೆ.