ನಿರ್ದೇಶಕ ವಿವೇಕ್ ಆಫ್ ಕ್ಯಾಮೆರಾ ಬೆತ್ತಲೆ ಡ್ಯಾನ್ಸ್ ಮಾಡುವಂತೆ ಹೇಳಿದ್ದರು: ತನುಶ್ರೀ

ಇತ್ತೀಚೆಗಷ್ಟೇ ಬಾಲಿವುಡ್ ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ...
ವಿವೇಕ್ ಅಗ್ನಿಹೋತ್ರಿ - ತನುಶ್ರೀ ದತ್ತ
ವಿವೇಕ್ ಅಗ್ನಿಹೋತ್ರಿ - ತನುಶ್ರೀ ದತ್ತ
ನವದೆಹಲಿ: ಇತ್ತೀಚೆಗಷ್ಟೇ ಬಾಲಿವುಡ್ ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತ ಅವರು ಈಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
2005ರಲ್ಲಿ ‘ಚಾಕಲೇಟ್: ಡೀಪ್ ಡಾರ್ಕ್ ಸೀಕ್ರೆಟ್ಸ್’ಸಿನಿಮಾ ಸೆಟ್ ನಲ್ಲಿ ಆ ಚಿತ್ರದ ನಿರ್ದೇಶಕರು ನನ್ನೊಂದಿಗೆ ಅಸಭವ್ಯವಾಗಿ ವರ್ತಿಸಿದ್ದರು ಮತ್ತು ಆಫ್ ಕ್ಯಾಮೆರಾ ಬೆತ್ತಲಾಗಿ ಡ್ಯಾನ್ಸ್ ಮಾಡುವಂತೆ ಹೇಳಿದ್ದರು ಎಂದು ನೇರವಾಗಿ ನಿರ್ದೇಶಕ ಹೆಸರು ಪ್ರಸ್ತಾಪಿಸದೆ ತನುಶ್ರೀ ಆರೋಪಿಸಿದ್ದಾರೆ.
ಆಫ್ ಕ್ಯಾಮೆರಾ 'ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡುವಂತೆ' ‘ಚಾಕಲೇಟ್: ಡೀಪ್ ಡಾರ್ಕ್ ಸೀಕ್ರೆಟ್ಸ್’ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದರು. ಇದಕ್ಕೆ ನಾನು ಒಪ್ಪಿಕೊಳ್ಳಲಿಲ್ಲ ಮತ್ತು ಈ ವೇಳೆ ಸಹ ನಟರಾದ ಇರ್ಫಾನ್ ಖಾನ್ ಹಾಗೂ ಸುನೀಲ್ ಶೆಟ್ಟಿ ನನ್ನ ಬೆಂಬಲಕ್ಕೆ ನಿಂತರು ಎಂದು ತನುಶ್ರೀ ದತ್ತ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಇರ್ಫಾನ್ ಖಾನ್ ಗೆ ನಾನು ಕ್ಯೂ ಕೊಡಬೇಕು ಅಂತ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೂಚಿಸಿದರು. ಅಷ್ಟಕ್ಕೂ, ಅದು ನನ್ನ ಶಾಟ್ ಆಗಿರಲಿಲ್ಲ. ಇರ್ಫಾನ್ ಖಾನ್ ಅವರ ಕ್ಲೋಸಪ್ ಶಾಟ್ ಆಗಿತ್ತು. ಅವರು ಏನನ್ನೋ ನೋಡಿಕೊಂಡು ಎಕ್ಸ್ ಪ್ರೆಶನ್ ಕೊಡಬೇಕಿತ್ತು. ಆಗ ನಿರ್ದೇಶಕ ನನ್ನನ್ನ ಕರೆದು - ''ಹೋಗಿ ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡು, ಅವರಿಗೆ ಕ್ಯೂ ಕೊಡು' ಎಂದರು ಎಂದು ತನುಶ್ರೀ ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com