ಮುಂಬೈ: 16 ವರ್ಷದ ಬಾಲಕನ ಅತ್ಯಾಚಾರ ಮಾಡಿರುವ ಆರೋಪದಡಿ ಬಾಲಿವುಡ್ ನಟಿ ಕಂಗನಾ ರಣಾವತ್ ರ ಕೇಶ ವಿನ್ಯಾಸಗಾರನನ್ನು ಪೊಲೀಸರು ಬಂಧಿಸಿದ್ದಾರೆ.
42 ವರ್ಷದ ಬ್ರೆಂಡನ್ ಅಲಿಸ್ಟರ್ ಡಿ ಜೀಯನ್ನು ಮಣಿಕಾರ್ಣಿಕಾ ಚಿತ್ರದ ಸೆಟ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕ ತನಗೆ 18 ವರ್ಷ ಎಂದು ಸುಳ್ಳು ಹೇಳಿ ಡೇಟಿಂಗ್ ಆ್ಯಪ್ ನಲ್ಲಿ ರಿಲೇಶನ್ ಶಿಪ್ ಗೆ ಆಹ್ವಾನಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವಕನ ತಾಯಿ ನೀಡಿದ ದೂರಿನ ಅನ್ವಯ ಅಪ್ರಾಪ್ತ ಬಾಲಕನೊಂದಿಗೆ ಸಂಬಂಧ ಬೆಳೆಸಿದ್ದ ಬ್ರೆಂಡನನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಲಾಗಿದೆ.