'ಬೇಬಿ ಬಂಪ್' ಟಾಪ್ ಲೆಸ್ ಫೋಟೋ ಶೇರ್ ಮಾಡಿದ 'ದಿ ವಿಲನ್' ನಟಿ ಆ್ಯಮಿ!
ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ನಟನೆಯ ದಿ ವಿಲನ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಗರ್ಭಿಣಿಯಾಗಿದ್ದು ಟಾಪ್ ಲೆಸ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ನಟನೆಯ ದಿ ವಿಲನ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಗರ್ಭಿಣಿಯಾಗಿದ್ದು ಟಾಪ್ ಲೆಸ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಮದುವೆಗೂ ಮುಂಚೆ ಗರ್ಭಿಣಿಯಾಗಿದ್ದ ಆ್ಯಮಿ ಜಾಕ್ಸನ್ 2018ರ ಜನವರಿ 1ರಂದ ತಾವು ಉದ್ಯಮಿ ಜಾರ್ಜ್ ಪನಾಯೋಟೋ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದರು.
ಇದಾದ ಬಳಿಕ ಬ್ರಿಟನ್ ಮದರ್ಸ್ ಡೇಯಂದು ಪನಾಯೋಟೋ ಜೊತೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ತಾವು ತಾಯಿಯಾಗುತ್ತಿರುವುದಾಗಿ ತಿಳಿಸಿದ್ದರು.
ಈ ಹಿಂದೆ ಆ್ಯಮಿ ಹಲವು ಬಾರಿ ಬೇಬಿ ಬಂಪ್ ಪೋಟೋಗಳನ್ನು ಹಾಕಿದ್ದರು. ಆದರೆ ಈ ಬಾರಿ ಟಾಪ್ ಲೆಸ್ ನಲ್ಲಿ ಬೇಬಿ ಬಂಪ್ ಫೋಟೋವನ್ನು ಹಾಕಿದ್ದಾರೆ.