ದಬಾಂಗ್ -3 ಶೂಟಿಂಗ್ ನಲ್ಲಿ ಸಲ್ಮಾನ್ ಖಾನ್ ಗೆ ಹೊಡೆಯಲಿಕ್ಕೆ ಆಗಲಿಲ್ಲ- ಸುದೀಪ್ 

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಯನದ ದಬಾಂಗ್ -3 ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ವಿಲಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
ಸುದೀಪ್- ಸಲ್ಮಾನ್ ಖಾನ್
ಸುದೀಪ್- ಸಲ್ಮಾನ್ ಖಾನ್
Updated on

ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಯನದ ದಬಾಂಗ್ -3 ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ವಿಲಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಇವರಿಬ್ಬರ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಂತಿರುವ ಪೋಟೋವೊಂದು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಲ್ಮಾನ್ ಖಾನ್ ಹಾಗೂ ಸುದೀಪ್ ಕುಸ್ತಿಯಲ್ಲಿ ತೊಡಗಿರುವಂತಹ ಪೋಟೋ ಇದಾಗಿದೆ. 

ಸಲ್ಮಾನ್ ಖಾನ್ ಜೊತೆಗೆ ಇತ್ತೀಚಿಗೆ ಜೀಮ್ ನಲ್ಲಿ ತರಬೇತಿ ಪಡೆದುಕೊಂಡಿದ್ದ ಕಿಚ್ಚ ಸುದೀಪ್,  ಅವರೊಂದಿಗಿನ ಒಡನಾಟವನ್ನು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡಿದ್ದೇನೆ. ಸಲ್ಮಾನ್ ಖಾನ್ ಪ್ರಾಣಿ ರೀತಿಯಲ್ಲಿ ತರಬೇತಿ ನೀಡುತ್ತಾರೆ. ಅವರ ತರಬೇತಿ ನಿಜಕ್ಕೂ ಕಠಿಣಕರವಾಗಿರುತ್ತದೆ ಎಂದಿದ್ದಾರೆ. 

ಬಾಲಿವುಡ್ ನಲ್ಲಿ ಕೆಲಸದ ಅನುಭವವನ್ನು ಹಂಚಿಕೊಂಡ ಅವರು,  ದಕ್ಷಿಣ ಭಾರತದ ನಿರ್ದೇಶಕ ಆರ್ ಜಿವಿ ಮೂಲಕ ಮೊದಲ ಬಾರಿಗೆ ಬಾಲಿವುಡ್ ಪ್ರವೇಶವಾಯಿತು. ಹಿಂದಿ ಮಾತನಾಡಲು ಆರಂಭಿಸಿದಾಗ ಅತ್ಯಂತ ವಿಶ್ವಾಸ ಮೂಡಿತು. ಅವರ ಹಿಂದಿ ಕೆಟ್ಟದಾಗಿತ್ತು ಆದರೆ, ಅವರೊಬ್ಬ ಅದ್ಬುತ ತಂತ್ರಜ್ಞರಾಗಿದ್ದು, ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದರು. ಈ ಬಾರಿ ಮತ್ತೆ ಪ್ರಭುದೇವ ನಿರ್ದೇಶಕರ ಜೊತೆಗೆ ಅಭಿನಯಿಸಿದದ್ದು ತುಂಬಾ ಕಂಪರ್ಟ್ ಆಗಿತ್ತು ಎಂದರು.

ದಬಾಂಗ್ -3 ಮೊದಲ ದಿನದ ಸೆಟ್ ಬಗ್ಗೆ ನೆನಪು ಮಾಡಿಕೊಂಡ ಅವರು, ಹಿಂದೆ ಭಾಷೆಯಲ್ಲಿ ಹಿಡಿತ ಇಲ್ಲದ ಕಾರಣ ದೊಡ್ಡ ದೊಡ್ಡ ಸಾಲು ನೀಡದಂತೆ ಪ್ರಭುದೇವ ಬಳಿ ಮನವಿ ಮಾಡಿಕೊಂಡಿದ್ದರಂತೆ. ಸಲ್ಮಾನ್ ಖಾನ್ ಜೊತೆಗಿನ ಅನುಭವ ಅದ್ಬುತವಾಗಿತ್ತು. ಹೃದಯ ಶ್ರೀಮಂತಿಕೆಯ ನಟ ಎಂದು ಹೊಗಳಿದರು.

ಮೊದಲ ಪೈಟ್ ಸನ್ನಿವೇಶದಲ್ಲಿ ಸಲ್ಮಾನ್ ಖಾನ್ ಅವರಿಗೆ ಹೊಡೆಯಲು ಸುದೀಪ್ ಯಿಂದ ಸಾಧ್ಯವಾಗಲಿಲ್ಲವಂತೆ. ಆ ದೃಶ್ಯದಲ್ಲಿ ಅವರ ಹೃದಯಕ್ಕೆ ಹೊಡೆಯುವುದು ತುಂಬಾ ಕಷ್ಟವಾಗಿತ್ತು. ಬುಡ್ಡಿ ಕಿಕ್ ಮಿ ! ಅಂತಾ ಸಲ್ಮಾನ್ ಖಾನ್ ಅವರೇ ಹೇಳಿದರು. ಅವರ ಮೇಲಿನ ಗೌರವದಿಂದ ಹೊಡೆಯಲಿಲ್ಲ. ನಂತರ ಅದನ್ನು ಬೇರೆ ರೀತಿಯಲ್ಲಿ ಚಿತ್ರೀಕರಿಸಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

View this post on Instagram

The sweetest thee is......

A post shared by kicchasudeep (@kichchasudeepa) on

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com