ರಾಖಿ ಸಾವಂತ್-ದೀಪಕ್ ಕಲಾಲ್
ಬಾಲಿವುಡ್
ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಾಜಿ ಪ್ರಿಯತಮನ ಮೇಲೆ ಲೈವ್ ಮಾಡಿ ಹಲ್ಲೆ!
ಇತ್ತೀಚೆಗಷ್ಟೇ ತಾವು ಮೊದುವೆಯಾಗುವುದಾಗಿ ಹೇಳಿ ನಂತರ ಮದುವೆ ಮುರಿದುಬಿತ್ತು ಅಂತ ಕಂಬನಿ ಮಿಡಿದಿದ್ದ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಾಜಿ...
ನವದೆಹಲಿ: ಇತ್ತೀಚೆಗಷ್ಟೇ ತಾವು ಮೊದುವೆಯಾಗುವುದಾಗಿ ಹೇಳಿ ನಂತರ ಮದುವೆ ಮುರಿದುಬಿತ್ತು ಅಂತ ಕಂಬನಿ ಮಿಡಿದಿದ್ದ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಾಜಿ ಪ್ರಿಯಕರ ಕಾಮಿಡಿಯನ್ ದೀಪಕ್ ಕಲಾಲ್ ಮೇಲೆ ಕೆಲವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹರಿಯಾಣದ ಗುರುಗ್ರಾಮದ ಬಳಿ ಈ ಘಟನೆ ನಡೆದಿದ್ದು ಎರಡು ದಿನಗಳ ಹಿಂದೆ ದೀಪಕ್ ಮೇಲೆ ಹಲ್ಲೆಯಾಗಿದ್ದು ಹಲ್ಲೆಕಾರರು ಲೈವ್ ಮಾಡಿ ಹಲ್ಲೆ ನಡೆಸಿದ್ದಾರೆ. ಗಾಯಕ ಫಾಜಿಲಪುರಿಯಾ ಅವರ ಮ್ಯಾನೇಜರ್ ನಿಂದಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇತ್ತೀಚೆಗೆ ನೋಯ್ಡಾಗೆ ತೆರಳಿದ್ದ ದೀಪಕ್ ಕಲಾಲ್ ನಗರದ ಪಾರ್ಕಿಂಗ್ ನಲ್ಲಿ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿ ತಾವು ಮರಗಳಿಗೆ ನೀರು ಹಾಕುತ್ತಿರುವುದಾಗಿ ಬರೆದುಕೊಂಡಿದ್ದರು. ಇನ್ನ ನೊಯ್ಡಾದಿಂದ ಹಿಂದಿರುಗುತ್ತಿದ್ದ ವೇಳೆ ಫಾಜಿಲಪುರಿಯಾ ಮ್ಯಾನೇಜರ್ ತನ್ನ ಗೆಳೆಯರೊಂದಿಗೆ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.
ದೀಪಕ್ ಮೇಲಿನ ಹಲ್ಲೆ ಕುರಿತಂತೆ ಪ್ರತಿಕ್ರಿಯಿಸಿರುವ ರಾಖಿ, ವಿಷಯ ತಿಳಿದು ತುಂಬಾ ನೋವಾಯಿತು. ಆ ವ್ಯಕ್ತಿ ಹಲ್ಲೆ ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ.
Hello @DelhiPolice Deepak kalal Beaten by @deepaknandal58 He is a on the road Guagaon Please take some Action Some video on you tube to just see there.@CPDelhi pic.twitter.com/DmY2tKZbe8
— Bhootnath
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ