ಆದಿತ್ಯಾ ಪಂಚೊಲಿ
ಆದಿತ್ಯಾ ಪಂಚೊಲಿ

ಜೀವ ಬೆದರಿಕೆ ಆರೋಪ: ಬಾಲಿವುಡ್ ನಟ ಆದಿತ್ಯ ಪಂಚೊಲಿ ವಿರುದ್ಧ ಪ್ರಕರಣ ದಾಖಲು

ಕಾರು ಮೆಕಾನಿಕ್ ಗೆ ಜೀವ ಬೆದರಿಕೆವೊಡ್ಡಿದ ಆರೋಪದ ಮೇರೆಗೆ ಬಾಲಿವುಡ್ ನಟ ಆದಿತ್ಯಾ ಪಂಚೊಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ

ಮುಂಬೈ: ಕಾರು ಮೆಕಾನಿಕ್ ಗೆ  ಜೀವ ಬೆದರಿಕೆವೊಡ್ಡಿದ ಆರೋಪದ ಮೇರೆಗೆ ಬಾಲಿವುಡ್ ನಟ ಆದಿತ್ಯಾ ಪಂಚೊಲಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾರು ರಿಪೇರಿ ಮಾಡಿದಕ್ಕಾಗಿ  2. 82, 158 ರೂಪಾಯಿ ಕೇಳಿದ್ದಕ್ಕೆ  ತಮ್ಮನ್ನು ಕೊಲ್ಲುವುದಾಗಿ ಆದಿತ್ಯ ಪಂಚೊಲಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಘಟನೆಯಿಂದಾಗಿ  ಕಾರು ಮೆಕಾನಿಕ್  ಪಂಚೊಲಿ ವಿರುದ್ಧ ವಾರ್ಸೊರಾ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 506 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಮುಂದಿನ ತನಿಖೆ  ಪ್ರಗತಿಯಲ್ಲಿದೆ.

Related Stories

No stories found.

Advertisement

X
Kannada Prabha
www.kannadaprabha.com