ರಕುಲ್ ಪ್ರೀತ್
ಬಾಲಿವುಡ್
ಕಾಸು ಕೇಳಿದ್ರೂ, ಬಿಡಿಗಾಸು ಕೊಡದೆ ಹೋದ ನಟಿ ರಕುಲ್ ಪ್ರೀತ್, ವಿಡಿಯೋ ವೈರಲ್!
ಸಾರ್ವಜನಿಕವಾಗಿ ತುಂಡುಡುಗೆ ತೊಟ್ಟು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಇದೀಗ ಮತ್ತೊಂದು ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.
ಮುಂಬೈ: ಸಾರ್ವಜನಿಕವಾಗಿ ತುಂಡುಡುಗೆ ತೊಟ್ಟು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಇದೀಗ ಮತ್ತೊಂದು ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.
ಮುಂಬೈನ ರೆಸ್ಟೋರೆಂಟ್ ವೊಂದರಿಂದ ಹೊರ ಬಂದ ರಕುಲ್ ಪ್ರೀತ್ ತಮ್ಮ ಕಾರಿನ ಬಳಿ ಹೊರಟ್ಟಿದ್ದರು. ಈ ವೇಳೆ ದಿಢೀರನೇ ಬಂದ ಸ್ಥಳೀಯ ಬಡ ಮಕ್ಕಳು ಹಣಕ್ಕಾಗಿ ಮೊರೆ ಇಟ್ಟು ಅವರನ್ನು ಬೆಂಬಿಡದೆ ಹಿಂಬಾಲಿಸಿದರು.
ಮಕ್ಕಳ ವರ್ತನೆಯಿಂದ ಕಿರಿಕಿರಿಗೊಳಲಾದ ರಕುಲ್ ಪ್ರೀತ್ ಕಾರಿಗೆ ಹತ್ತಲು ಮುಂದಾದಾಗ ಕಾರಿನ ಚಾಲಕ ಬಂದು ಮಕ್ಕಳನ್ನು ದೂರ ತಳ್ಳಿದ್ದರಿಂದ ಕಾರಿನ ಒಳಗೆ ಕೂತು ರಕುಲ್ ಪ್ರೀತ್ ಅಲ್ಲಿಂದ ಹೋಗಿದ್ದಾರೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಕುಲ್ ಪ್ರೀತ್ ವರ್ತನೆ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ಮಕ್ಕಳಿಗೆ ಬಿಡಿಗಾಸು ಕೊಡದ ನಿಮ್ಮ ವರ್ತನೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ