ಅದ್ನಾನ್ ಸಮಿ
ಬಾಲಿವುಡ್
ಪ್ರಧಾನಿ ಮೋದಿ ದಿಟ್ಟ ನಿರ್ಧಾರ ಹೊಗಳಿದ ಪಾಕ್ ಗಾಯಕ: ದ್ರೋಹಿ ಪಟ್ಟಕಟ್ಟಿ ಟ್ರೋಲ್ ಮಾಡಿದ ಪಾಕಿಗರು!
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ಮಾಡಿ ಯಶಸ್ವಿಯಾಗಿತ್ತು. ಈ ನಿರ್ಧಾರವನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ...
ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ಮಾಡಿ ಯಶಸ್ವಿಯಾಗಿತ್ತು. ಈ ನಿರ್ಧಾರವನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಐಎಎಫ್ ಕ್ರಮಕ್ಕೆ ಪಾಕ್ ಗಾಯಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ಪಾಕಿಗರು ಟ್ರೋಲ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ನಿರ್ಧಾರಕ್ಕೆ ಪಾಕ್ ಗಾಯಕ ಅದ್ನಾನ್ ಸಮಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಭಯೋತ್ಪಾದನೆಗೆ ಅಂತ್ಯ ಹಾಡುವುದಕ್ಕೂ ಬೆಂಬಲ ಸೂಚಿಸಿರುವುದು ಪಾಕ್ ಟ್ರೋಲರ್ ಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿಯೇ ಅವರು ಅದ್ನಾನ್ ಅವರನ್ನು ದ್ರೋಹಿ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಲಿಫ್ಟ್ ಕರಾದೆ, ಕಭಿ ತೋ ನಜರ್ ಮಿಲಾವೋ. ತೇರಿ ಯಾದ್ ಹೀಗೆ ಆಲ್ಬಂಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪಾಕಿಸ್ತಾನಿ ಗಾಯಕ ಅದ್ನಾನ್ ಸಮಿ. ಆಲ್ಬಂನಿಂದ ಮೆಲ್ಲನೆ ಸಿನಿಮಾಗಳಿಗೂ ಎಂಟ್ರಿ ಪಡೆದು ಕೆಲಕಾಲ ಭಾರತದಲ್ಲೇ ನೆಲೆಯೂರಿದ್ದರು.
“The Force Is With You” @narendramodi ji.

