ಬಾಲಿವುಡ್
ರಣವೀರ್ ಗಲ್ಲಿ ಬಾಯ್ ಹಾಡಿಗೆ ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಫಿದಾ!
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಅವರು ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್ ಹಾಡಿಗೆ ಫಿದಾ ಆಗಿದ್ದಾರೆ.
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ ಅವರು ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಗಲ್ಲಿ ಬಾಯ್ ಹಾಡಿಗೆ ಫಿದಾ ಆಗಿದ್ದಾರೆ.
ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅಭಿನಯದ ಗಲ್ಲಿ ಬಾಯ್ ಚಿತ್ರ ಗಲ್ಲಾಪಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಅಪ್ನಾ ಟೈಮ್ ಆಯೇಗಾ ಎನ್ನುವ ಹಾಡು ರಿಲೀಸ್ ಗೂ ಮುನ್ನವೇ ಎಲ್ಲರ ಬಾಯಲ್ಲೂ ನಲಿದಾಡುತ್ತಿತ್ತು.
ಇದೀಗ ಜಾನ್ ಸೀನಾ ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಇದೇ ಹಾಡಿನ ಸಾಲು ಇರುವ ಗಲ್ಲಿ ಬಾಯ್ ಚಿತ್ರದ ಫೋಟೋವನ್ನು ಶೇರ್ ಮಾಡಿದ್ದಾರೆ.