ಸಿಂಗರ್ ರಾನು ಮಂಡಲ್ ಹೊಸ ಅವತಾರಕ್ಕೆ ದಂಗಾದ ನೆಟ್ಟಿಗರು!
ಮುಂಬೈ: ಕೆಲ ತಿಂಗಳ ಹಿಂದೆಯಷ್ಟೇ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರಿಂದ 'ತೆರಿ ಮೇರಿ ಕಹಾನಿ' ಹಾಡಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ದೇಶಾದ್ಯಂತ ಸಿಂಗರ್ ಆಗಿ ಜನಪ್ರಿಯರಾಗಿದ್ದ ರಾನು ಮಂಡಲ್ ಹೊಸ ಅವತಾರ ಕಂಡ ನೆಟ್ಟಿಗರು ದಂಗಾಗಿದ್ದಾರೆ.
ಸಂಧ್ಯಾ ಅವರ ಕಾನ್ಫುರದಲ್ಲಿನ ಮೇಕ್ ಓವರ್ ಸಲೂನ್ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡು ಮಿಂಚಿದ್ದಾರೆ. ಇವರ ಹೊಸ ಅವತಾರ ಕಂಡು ನೆಟ್ಟಿಗರು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.
ಸಂಧ್ಯಾ ದ್ವಾರಕದಲ್ಲಿನ ವಿಎಲ್ ಸಿಸಿ ಸಂಸ್ಥೆಯಲ್ಲಿ ಕಾಸ್ಮೆಟೊಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡದೆ ನಂತರ 2013ರಿಂದಲೂ ಬ್ಯೂಟಿಷಿಯನ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.
ಏರ್ ಲೈನ್ಸ್, ಎಬಿಪಿ ನ್ಯೂಸ್, ಜಿ ಜಾಗರಣ್ ಮತ್ತಿತರ ನ್ಯೂಸ್ ಚಾನೆಲ್ ಗಳಲ್ಲಿ ಮೇಕಪ್ ಕಲಾವಿದೆಯಾಗಿ ಕಾರ್ಯನಿರ್ವಹಿಸಿದ್ದ ಸಂಧ್ಯಾ ಕಳೆದ ವರ್ಷ ನವದೆಹಲಿಯಲ್ಲಿ ಮೊದಲ ಮೇಕ್ ಓವರ್ ಮೇಕಪ್ ಸ್ಟೂಡಿಯೋವನ್ನು ಸ್ಥಾಪಿಸಿದ್ದರು. ಶ್ರೀನಗರದಲ್ಲಿ ಎರಡನೇಯದು ಹಾಗೂ ಕಾನ್ಪುರದಲ್ಲಿ 3ನೇಯ ಶಾಖೆಯನ್ನು ತೆರೆದಿದ್ದಾರೆ.
ಸಂಧ್ಯಾ ಅವರ ಹೊಸ ಸಲೋನ್ ಉದ್ಘಾಟನಾ ಕಾರ್ಯಕ್ರಮಕ್ಕೆ ರಾನು ಮಂಡಲ್ ಅವರನ್ನು ಸಂಪೂರ್ಣವಾಗಿ ಮೇಕಪ್ ಮಾಡಿ ಕರೆತರಲಾಗಿತ್ತು. ಅಲ್ಲದೇ ರಾನು ಮಂಡಲ್ ಅವರೊಂದಿಗೆ ವಿದ್ಯಾ, ಉಜ್ವಲ್ ಮತ್ತಿತರ ಮಾಡೆಲ್ ಗಳು ರಾಂಪ್ ವಾಕ್ ಮಾಡಿದ್ದಾರೆ. ಕಾನ್ಪುರದಲ್ಲಿನ ಇಂದಿರಾನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾನು ಮಂಡಲ್ ಹಾಗೂ ಬ್ಯೂಟಿ ಎಕ್ಸ್ ಪರ್ಟ್ ಸಂಧ್ಯಾ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.
ಹೊಸ ಅವತಾರ ಕುರಿತಂತೆ ಪ್ರತಿಕ್ರಿಯಿಸಿದ ರಾನು ಮಂಡಲ್, ಸಂಧ್ಯಾ ಅವರು ನನ್ನ ಸಂಪೂರ್ಣ ನೋಟವನ್ನೇ ಬದಲಾಯಿಸಿದ್ದಾರೆ. ಇದರಿಂದಾಗಿ ಆತ್ಮವಿಶ್ವಾಸ ಬಂದಿದ್ದು, ಅವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ