ತೆರೆ ಮೇಲೆ ಲಾಲೂ ಜೀವನಗಾಥೆ! ಬಿಹಾರ ಮಾಜಿ ಸಿಎಂ ಪಾತ್ರದಲ್ಲಿ ಯಶ್

ಬಾಲಿವುಡ್ ನಲ್ಲಿ ಬಯೋಪಿಕ್ ಗಳ ಜಮಾನಾ ಪ್ರಾರಂಭವಾಗಿದ್ದು ಇಂದು ನಿನ್ನೆಯಲ್ಲ. ಅದರಲ್ಲಿಯೂ ರಾಜಕೀಯ ನಾಯಕರ ಜೀವನಾಧಾರಿತ ಚಿತ್ರಗಳಿಗೆ ಯಾವ ಕೊರತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜೀವ್ ಗಾಂಧಿ, ಬಾಳಾ ಸಾಹೇಬ್ ಠಾಕ್ರೆ ಸೇರಿ ಹಲವರ ಜೀವನಾಧಾರಿತ ಚಿತ್ರಗಳು ಇದಾಗಲೇ ತೆರೆಕಂಡು ಯಶಸ್ವಿಯಾಗಿದೆ. 
ಲಾಲೂ ಪ್ರಸಾದ್ ಯಾದವ್
ಲಾಲೂ ಪ್ರಸಾದ್ ಯಾದವ್
Updated on: 

ಬಾಲಿವುಡ್ ನಲ್ಲಿ ಬಯೋಪಿಕ್ ಗಳ ಜಮಾನಾ ಪ್ರಾರಂಭವಾಗಿದ್ದು ಇಂದು ನಿನ್ನೆಯಲ್ಲ. ಅದರಲ್ಲಿಯೂ ರಾಜಕೀಯ ನಾಯಕರ ಜೀವನಾಧಾರಿತ ಚಿತ್ರಗಳಿಗೆ ಯಾವ ಕೊರತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜೀವ್ ಗಾಂಧಿ, ಬಾಳಾ ಸಾಹೇಬ್ ಠಾಕ್ರೆ ಸೇರಿ ಹಲವರ ಜೀವನಾಧಾರಿತ ಚಿತ್ರಗಳು ಇದಾಗಲೇ ತೆರೆಕಂಡು ಯಶಸ್ವಿಯಾಗಿದೆ. ಇದೀಗ ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಜೀವನಾಧಾರಿತ ಚಿತ್ರವೊಂದು ತೆರೆ ಮೇಲೆ ಬರಲು ತಯಾರಾಗುತ್ತಿದೆ.

ತಮ್ಮ ರಾಜಕೀಯ ಪಕ್ಷ ರಾಷ್ಟ್ರೀಯ ಜನತಾದಳದ ಚಿಹ್ನೆಯಾದ "ಲಾಟೀನ್" ಎಂಬ ಹೆಸರನ್ನೇ ಚಿತ್ರಕ್ಕೆ ಇರಿಸಲಾಗಿದೆ.ಈ ಚಿತ್ರದಲ್ಲಿ ಭೋಜ್‌ಪುರಿ ನಟ ಯಶ್ ಕುಮಾರ್ ಲಾಲೂ ಪ್ರಸಾದ್ ಯಾದವ್ ಅವರ ಪಾತ್ರದಲ್ಲಿ ನಟಿಸಲಿದ್ದಾರೆ.

ರಾಜಕೀಯ ನಾಯಕನ ಜೀವನದ ವಿಭಿನ್ನ ಅಂಶಗಳನ್ನು ಆಸಕ್ತಿದಾಯಕ ರೀತಿಯಲ್ಲಿ ತೋರಿಸಲಿರುವ  ಈ ಚಿತ್ರ ಮುಂದಿನ ವರ್ಷ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.

"ಲಾಟೀನ್ ಚಿತ್ರದ ತ್ರ ಮುಂದಿನ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಮತ್ತು ಇದು ಲಾಲೂ ಯಾದವ್ ಅವರ ಜೀವನವನ್ನು ಆಧರಿಸಿದೆ "ಎಂದು ನಟ ಯಶ್  ಮಂಗಳವಾರ ಸಂಜೆ ಸುದ್ದಿಗಾರರಿಗೆ ತಿಳಿಸಿದರು.

ಯಾದವ್ ಅವರ ಪತ್ನಿ ಮತ್ತು ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಪಾತ್ರದಲ್ಲಿ ಸ್ಮೃತಿ ಸಿನ್ಹಾ ನಟಿಸಲಿದ್ದಾರೆ ಎಂದು ನಟ ಹೇಳಿದರು.ಚಿತ್ರದ ಶೂಟಿಂಗ್ ಬಿಹಾರ ಹಾಗೂ ಗುಜರಾತ್‌ನ ವಿವಿಧ ಭಾಗಗಳಲ್ಲಿ ನಡೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com