ಬಾಲಿವುಡ್ ಹಿರಿಯ ನಟ ಖಾದರ್‌ ಖಾನ್‌ ಕೆನಡಾದಲ್ಲಿ ನಿಧನ

ಹಿಂದಿ ಚಿತ್ರರಂಗದ ಹಿರಿಯ ನಟ ಖಾದರ್‌ ಖಾನ್‌ (81) ನಿಧನರಾಗಿದ್ದಾರೆ. ಕೆನಡಾದ ಟೊರಾಂಟೊದಲ್ಲಿರುವ ಆಸ್ಪತ್ರೆಯಲ್ಲಿ ಖಾದರ್‌ ಖಾನ್‌ ಕೊನೆಯುಸಿರೆಳೆದರು

Published: 01st January 2019 12:00 PM  |   Last Updated: 01st January 2019 11:45 AM   |  A+A-


Kader Khan

ಖಾದರ್ ಖಾನ್

Posted By : SD SD
Source : Online Desk
ಮುಂಬಯಿ: ಹಿಂದಿ ಚಿತ್ರರಂಗದ ಹಿರಿಯ ನಟ ಖಾದರ್‌ ಖಾನ್‌ (81) ನಿಧನರಾಗಿದ್ದಾರೆ.

ಕೆನಡಾದ ಟೊರಾಂಟೊದಲ್ಲಿರುವ ಆಸ್ಪತ್ರೆಯಲ್ಲಿ ಖಾದರ್‌ ಖಾನ್‌ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. 

ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಖಾದರ್‌ ಖಾನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ ನಿರಂತರವಾಗಿ ವೆಂಟಿಲೇಟರ್‌ ಅಳವಡಿಸಲಾಗಿತ್ತು. 

ಖಾದರ್‌ ಖಾನ್‌ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಸಂಭಾಷಣೆಕಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಖಾದರ್‌ ಖಾನ್‌ 250ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. 

ಈಗಿನ ಆಫ್ಘಾನಿಸ್ತಾದ ಖಾಬೂಲ್‌ನಲ್ಲಿ ಜನಿಸಿದ ಖಾದರ್‌ ಖಾನ್‌ ಭಾರತಕ್ಕೆ ಬಂದು ಸಿನಿಮಾ ರಂಗದತ್ತ ಆಕರ್ಷಿತರಾದರು. 

1973ರಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು ಖಾದರ್‌ ಖಾನ್‌. ರಾಜೇಶ್‌ ಖನ್ನಾ ನಾಯಕರಾಗಿದ್ದ ದಾಗ್‌ ಚಿತ್ರದ ಮೂಲಕ ಬೆಳ್ಳಿತೆರೆಗೆ ಲಗ್ಗೆ ಹಾಕಿದ ಖಾದರ್ ಖಾನ್‌ ನಂತರ ಹಿಂದೆ ತಿರುಗಿ ನೋಡಲೇ ಇಲ್ಲ. 300ಕ್ಕೂ ಹೆಚ್ಚು ಸಿನಿಮಾಗಳಿಗೆ ಖಾದರ್ ಖಾನ್‌ ಬಣ್ಣ ಹಚ್ಚಿದ್ದಾರೆ. 
Stay up to date on all the latest ಬಾಲಿವುಡ್ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp