'ಕಣ್ಣಲ್ಲೆ ರೇಪ್'; ಬಾಲಿವುಡ್ ನಟಿ ಇಶಾ ಗುಪ್ತಾ ಆರೋಪ

ಹೋಟೆಲ್ ಮಾಲೀಕರೊಬ್ಬರು ನನ್ನನ್ನು ಕಣ್ಣಲ್ಲೆ ರೇಪ್ ಮಾಡುವಂತೆ ಕಾಮುಕ ಕಣ್ಣುಗಳಿಂದ ನೋಡುತ್ತಿದ್ದು ನನ್ನ ಜಂಘಾಬಲವೇ ಕುಸಿದಂತಾಗಿತ್ತು ಎಂದು ಬಾಲಿವುಡ್ ನಟಿ ಇಶಾ ಗುಪ್ತಾ ಆರೋಪಿಸಿದ್ದಾರೆ.
ಇಶಾ ಗುಪ್ತಾ
ಇಶಾ ಗುಪ್ತಾ
ಮುಂಬೈ: ಹೋಟೆಲ್ ಮಾಲೀಕರೊಬ್ಬರು ನನ್ನನ್ನು ಕಣ್ಣಲ್ಲೆ ರೇಪ್ ಮಾಡುವಂತೆ ಕಾಮುಕ ಕಣ್ಣುಗಳಿಂದ ನೋಡುತ್ತಿದ್ದು ನನ್ನ ಜಂಘಾಬಲವೇ ಕುಸಿದಂತಾಗಿತ್ತು ಎಂದು ಬಾಲಿವುಡ್ ನಟಿ ಇಶಾ ಗುಪ್ತಾ ಆರೋಪಿಸಿದ್ದಾರೆ.
ಇಶಾ ಅಭಿನಯದ ಒನ್ ಡೇ: ಜಸ್ಟೀಸ್ ಡೆಲಿವರ್ಡ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ತೆರಳಿದ್ದಾಗ ರೆಸ್ಟೋರೆಂಟ್ ಮಾಲೀಕ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ದುಖಃ ತೋಡಿಕೊಂಡಿದ್ದಾರೆ.
ರೋಹಿತ್ ವಿಗ್ ಎಂಬಾತ ನನ್ನ ಜೊತೆ ನಡೆದುಕೊಂಡಿದ್ದು ನನಗೆ ಕ್ರೂರವಾಗಿ ಕಂಡಿತು. ಒಂದು ಕ್ಷಣ ನನಗೆ ಅಭದ್ರತೆ ಕಾಡಿತು ಎಂದು ಹೇಳಿದ್ದಾರೆ. ನನ್ನ ಸುತ್ತಲು ಇಬ್ಬರು ಗಾರ್ಡ್ ಗಳಿದ್ದರೂ ಆತ ಕೆಟ್ಟದಾಗಿ ವರ್ತಿಸಿದ. ಅಂತಹವನನ್ನು ನಾಶ ಮಾಡಬೇಕು. ಇಂತಹವರ ವರ್ತನೆಯಿಂದ ನಾನು ರೇಪ್ ಗೆ ಒಳಗಾಗುತ್ತಿದ್ದಂತೆ ಅನಿಸಿತ್ತು ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com