ಓಡೋಡಿ ಬಂದು 2ನೇ ಬಾರಿ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ವಾಪಸ್ಸಾದ ಅತೃಪ್ತರು

ಸ್ಪೀಕರ್ ಮುಂದೆ ಹಾಜರಾಗಿ ತಮ್ಮ ರಾಜಿನಾಮೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಸೂಚನೆಯನ್ವಯ ಸಭಾಧ್ಯಕ್ಷ ರಮೇಶ್ ಕುಮಾರ್...
ಸ್ಪೀಕರ್ ಕಚೇರಿಗೆ ತೆರಳುತ್ತಿರುವ ರೆಬಲ್ ಶಾಸಕರು
ಸ್ಪೀಕರ್ ಕಚೇರಿಗೆ ತೆರಳುತ್ತಿರುವ ರೆಬಲ್ ಶಾಸಕರು
ಬೆಂಗಳೂರು: ಸ್ಪೀಕರ್ ಮುಂದೆ ಹಾಜರಾಗಿ ತಮ್ಮ ರಾಜಿನಾಮೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಸೂಚನೆಯನ್ವಯ ಸಭಾಧ್ಯಕ್ಷ ರಮೇಶ್ ಕುಮಾರ್ ಕಚೇರಿ ಗುರುವಾರ ರಾಜಕೀಯ ವಿದ್ಯಮಾನಗಳ ಕೇಂದ್ರಬಿಂದುವಾಯಿತು.
ಸ್ಪೀಕರ್ ರಮೇಶ್ ಕುಮಾರ್ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಕಚೇರಿಗೆ ಆಗಮಿಸಿ ಕಾದು ಕುಳಿತುಕೊಂಡಿದ್ದರು. ಗುರುವಾರ ಕೆಲವು ಶಾಸಕರು ರಾಜಿನಾಮೆ ಸಲ್ಲಿಸುತ್ತಾರೆ ಎಂಬ ವದಂತಿ ಇತ್ತು. ಆದರೆ ಇಂದು ಯಾವ ಶಾಸಕರೂ ರಾಜೀನಾಮೆ ಸಲ್ಲಿಸಲಿಲ್ಲ. ಸ್ಪೀಕರ್ ಮಧ್ಯಾಹ್ನ ಭೋಜನಕ್ಕೆ ಮನೆಗೆ ತೆರಳಿದ ಸಂದರ್ಭದಲ್ಲಿ ರೋಷನ್ ಬೇಗ್ ಸಭಾಧ್ಯಕ್ಷರ ಕಚೇರಿಗೆ ಆಗಮಿಸಿ ವಾಪಸ್ ತೆರಳಿದರು.
ಮಧ್ಯಾಹ್ನ ಕಚೇರಿಗೆ ಆಗಮಿಸಿದ ಸ್ಪೀಕರ್ ರಮೇಶ್ ಕುಮಾರ್ ಮಧ್ಯಾಹ್ನದ ಮೇಲೆ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ವಿಡಿಯೋ ರೆಕಾರ್ಡಿಂಗ್ ಮಾಡಲು ನಿಯೋಜಿಸಿದ ಕ್ಯಾಮೆರಾಮೆನ್ ಗೆ ಸೂಚನೆ ನೀಡಿದರು.
ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ಸಂಜೆ 6 ಗಂಟೆಗೆ ಓಡೋಡಿ ಬಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಎರಡನೇ ಬಾರಿ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಬಸ್ ನಲ್ಲಿ ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಮುಂಬೈಗೆ ವಾಪಸಾಗಿದ್ದಾರೆ.
ಈ ಮಧ್ಯೆ ಜೆಡಿಎಸ್ ನ ರಮೇಶ್ ಬಾಬು ರಾಜೀನಾಮೆ ಸಲ್ಲಿಸಿರುವ ಪಕ್ಷದ ಮೂವರು ಶಾಸಕರನ್ನು ಅನರ್ಹಗೊಳಿಸುವಂತೆ ರಮೇಶ್ ಕುಮಾರ್ ಗೆ ದೂರು ಸಲ್ಲಿಸಿದರು. ಆದರೆ ಪಕ್ಷದ ಅಧಿಕೃತ ನಾಯಕರು ಅಥವಾ ಜವಾಬ್ದಾರಿಯುತ ವ್ಯಕ್ತಿ ದೂರು ನೀಡಬೇಕೆಂದು ತಾಕೀತು ಮಾಡಿದ ಸ್ಪೀಕರ್ ಅವರನ್ನು ವಾಪಸ್ ಕಳುಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com