ಲಂಡನ್ ನ ಮೇಡಂ ಟುಸ್ಸಾಡ್ ನಲ್ಲಿ ದೀಪಿಕಾ ಪಡುಕೋಣೆ ಪ್ರತಿಮೆ ಅನಾವರಣ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಲಂಡನ್ ನ ಮೇಡಂ ಟುಸ್ಸಾಡ್ ನಲ್ಲಿ ತಮ್ಮ ಮೇಣದ ...

Published: 15th March 2019 12:00 PM  |   Last Updated: 15th March 2019 11:32 AM   |  A+A-


Deepika Padukone

ದೀಪಿಕಾ ಪಡುಕೋಣೆ

Posted By : SUD SUD
Source : PTI
ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಲಂಡನ್ ನ ಮೇಡಂ ಟುಸ್ಸಾಡ್ ನಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.

ಪತಿ ರಣವೀರ್ ಸಿಂಗ್ ಮತ್ತು ಪೋಷಕರ ಜೊತೆ ಲಂಡನ್ ಗೆ ತೆರಳಿ ಅಲ್ಲಿ ನಿನ್ನೆ ದೀಪಿಕಾ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಿದರು. ತಮ್ಮ ಮೇಣದ ಪ್ರತಿಮೆ ಕಂಡು ಆಶ್ಚರ್ಯಗೊಂಡಿದ್ದಲ್ಲದೆ ಖುಷಿಯಿಂದ ದೀಪಿಕಾ ನಾಚಿ ನೀರಾದರು.

ಪ್ರತಿಮೆಯನ್ನು ಕಂಡು ಖುಷಿಯಾದ ಪರಿ ರಣವೀರ್ ಸಿಂಗ್ ಅದನ್ನು ಮನೆಗೆ ಕೊಂಡೊಯ್ಯಬಹುದೇ ಎಂದು ಕೇಳಿದಾಗ, ನೀನು ಇಲ್ಲಿಗೆ ಶೂಟಿಂಗ್ ಗೆ ಬಂದ ಸಂದರ್ಭಗಳಲ್ಲೆಲ್ಲಾ ನನ್ನನ್ನು ಮಿಸ್ ಮಾಡಿಕೊಳ್ಳುತ್ತಿ ಎಂದು ಅನಿಸಿದರೆ ಇಲ್ಲಿಗೆ ಬರಬಹುದು ಎಂದು ದೀಪಿಕಾ ಪತಿಯನ್ನು ಕೆಣಕಿದರು.

ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ದೀಪಿಕಾ ಪೋಷಕರಾದ ಪ್ರಕಾಶ್ ಪಡುಕೋಣೆ, ಉಜ್ಜಲಾ ಪಡುಕೋಣೆ, ರಣವೀರ್ ಸಿಂಗ್ ಪೋಷಕರಾದ ಜಗಜಿತ್ ಸಿಂಗ್ ಮತ್ತು ಅಂಜು ಭಾವ್ನಾನಿ ಭಾಗವಹಿಸಿದ್ದರು.
View this post on Instagram

❤️ @madametussauds

A post shared by Deepika Padukone (@deepikapadukone) on

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp