ಮುಂಬೈ: ದೀಪಾವಳಿ ಪ್ರಯುಕ್ತ ಹಣೆಗೆ ತಿಲಕವನ್ನಿಟ್ಟುಕೊಂಡಿದ್ದ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಪೋಟೋ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.
ಅಂತಹವರನ್ನು ಕ್ರೋಧಾತ್ಮಕ ಇಸ್ಲಾಂವಾದಿಗಳು ಎಂದು ಬಾಲಿವುಡ್ ನಟಿ ಶಬಾನಾ ಅಜ್ಮಿ ಕರೆಯುವ ಮೂಲಕ ಶಾರೂಖ್ ಖಾನ್ ತಿಲಕವನ್ನಟ್ಟಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ತಿಲಕವನ್ನಟ್ಟಿಕೊಂಡಿದ್ದಕ್ಕೆ ನಕಲಿ ಮುಸ್ಲಿಂ ಎನ್ನುವವರು ಕ್ರೋಧಾತ್ಮಕ ಇಸ್ಲಾಂವಾದಿಗಳಾಗಿದ್ದಾರೆ. ಸುಂದರ ಸಂಪ್ರದಾಯವಿರುವ ಭಾರತದಲ್ಲಿ ಇಸ್ಲಾಂ ಧರ್ಮವೇನೂ ದುರ್ಬಲವಾಗಿಲ್ಲ. ಗಂಗಾ, ಯುಮುನೆಯಲ್ಲಿ ಭಾರತದ ಸೌಂದರ್ಯವಿದೆ ಎಂದು ಶಾಬಾನಾ ಆಜ್ಮಿ ಟ್ವೀಟ್ ಮಾಡಿದ್ದಾರೆ.
ಪತ್ನಿ ಗೌರಿಖಾನ್ , ಪುತ್ರ ಅಬ್ ರಾಮ್ ಖಾನ್ ಜೊತೆಗೆ ಹಣೆಗೆ ತಿಲಕವನ್ನಿಟ್ಟುಕೊಂಡಿರುವ ಪೋಟೋವನ್ನು ಭಾನುವಾರ ಶಾರೂಖ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದರು.ದೀಪಾವಳಿ ಎಲ್ಲರ ಬಾಳಲ್ಲಿ ಬೆಳಗಲಿ, ಸುಖ, ಸಂತೋಷವನ್ನುಂಟುಮಾಡಲಿ ಎಂದು ಶಾರೂಖ್ ಖಾನ್ ಶುಭ ಕೋರಿದ್ದರು.ಈ ಪೋಸ್ಟ್ ನಂತರ ಶಾರೂಖ್ ಖಾನ್ ಟ್ರೋಲ್ ಗೆ ಒಳಗಾಗಿದ್ದರು.
ಶಾರೂಖ್ ಖಾನ್ ಈ ರೀತಿಯಲ್ಲಿ ಟ್ರೋಲ್ ಗೆ ಗುರಿಯಾದದ್ದು ಇದೇ ಮೊದಲೇನಲ್ಲಾ, ಹಿಂದು ಹಬ್ಬಗಳ ಸಂದರ್ಭಗಳಲ್ಲಿ ಅವರನ್ನು ಟೀಕಿಸಲಾಗುತಿತ್ತು. ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿದ್ದ ಶಾರೂಖ್ ಖಾನ್ ಪೋಟೋಗೆ ಭಾರಿ ಟೀಕೆಗಳು ವ್ಯಕ್ತವಾಗಿದ್ದವು.
Advertisement