ನಿಮ್ಮ ಕನ್ಯತ್ವ ಯಾವಾಗ ಕಳೆದುಕೊಂಡಿರೀ ಎಂದ ಅಭಿಮಾನಿಗೆ ಜಂಘಾಬಲವೇ ಕುಸಿವಂತೆ ಮಾಡಿದ ಇಲಿಯಾನಾ

ಸಾಮಾಜಿಕ ಜಾಲತಾಣದಲ್ಲಿ ನಟಿಯರ ತೇಜೋವಧೆ ಜಾಸ್ತಿಯಾಗುತ್ತಿದ್ದು ವ್ಯಕ್ತಿಯೋರ್ವ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಸ್ ಅವರನ್ನು ಕನ್ಯತ್ವ ಯಾವಾಗ ಕಳೆದುಕೊಂಡಿರಿ ಎಂದು ಕೇಳಿದ್ದು ಇದಕ್ಕೆ ಗರಂ ಆಗಿರುವ ಇಲಿಯಾನಾ ಈ ಪ್ರಶ್ನೆಯನ್ನು ನಿಮ್ಮ ತಾಯಿನ್ನು ಕೇಳುತ್ತೀರಾ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

Published: 05th September 2019 03:59 PM  |   Last Updated: 05th September 2019 03:59 PM   |  A+A-


Ileana DCurz

ಇಲಿಯಾನಾ ಡಿಕ್ರೂಸ್

Posted By : Vishwanath S
Source : Online Desk

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ನಟಿಯರ ತೇಜೋವಧೆ ಜಾಸ್ತಿಯಾಗುತ್ತಿದ್ದು ವ್ಯಕ್ತಿಯೋರ್ವ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಸ್ ಅವರನ್ನು ಕನ್ಯತ್ವ ಯಾವಾಗ ಕಳೆದುಕೊಂಡಿರಿ ಎಂದು ಕೇಳಿದ್ದು ಇದಕ್ಕೆ ಗರಂ ಆಗಿರುವ ಇಲಿಯಾನಾ ಈ ಪ್ರಶ್ನೆಯನ್ನು ನಿಮ್ಮ ತಾಯಿನ್ನು ಕೇಳುತ್ತೀರಾ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. 

ನಟಿ ಇಲಿಯಾನಾ ಡಿಕ್ರೂಸ್ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ನನ್ನನ್ನು ಪ್ರಶ್ನೆ ಕೇಳಬೇಕೆಂದರೆ ಕೇಳಿ ನಾನು ಉತ್ತರಿಸುತ್ತೇನೆ ಎಂದು ಬರೆದುಕೊಂಡಿದ್ದರು. ಇದಕ್ಕೆ ಅಭಿಮಾನಿಗಳು ನಿಮ್ಮ ಮುಂದಿನ ಸಿನಿಮಾಗಳು ಯಾವುವು. ನಿಮ್ಮ ಅಭಿರುಚಿ ಮತ್ತು ಇಷ್ಟಗಳ ಬಗ್ಗೆ ಹೇಳಿ ಎಂದು ಕೇಳಿದ್ದಾರೆ. 

ಆದರೆ ಒಬ್ಬ ಅಭಿಮಾನಿ ಮಾತ್ರ ನಿಮ್ಮ ಕನ್ಯತ್ವ ಯಾವಾಗ ಕಳೆದುಕೊಂಡಿರೀ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಕೆರಳಿದ ಇಲಿಯಾನಾ, ನೀವು ಬೇರೆಯವರ ವಿಷಯಕ್ಕೆ ತುಂಬಾ ತಲೆ ಹಾಕುತ್ತೀರಾ. ನಿಮ್ಮ ತಾಯಿ ಏನು ಹೇಳುತ್ತಾರೆ ಎಂದು ಉತ್ತರಿಸುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ. 

ಇಲಿಯಾನಾ ಹಿಂದಿಯ ಪಾಗಲ್ ಪಂತಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟ ಜಾನ್ ಅಬ್ರಾಹಂ. ಅನಿಲ್ ಕಪೂರ್, ಅರ್ಷದ್ ವಾರ್ಸಿ ಹಾಗೂ ನಟಿ ಕೃತಿ ಕರಬಂಧ ಅಭಿನಯಿಸುತ್ತಿದ್ದಾರೆ. ನವೆಂಬರ್ 22ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp