ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡೋಣ ಬಾ ಅಂದಿದ್ದ ನಿರ್ದೇಶಕ, ಬಾಲಿವುಡ್ ನಟಿ ಉತ್ತರಕ್ಕೆ ನಿರ್ದೇಶಕ ತಬ್ಬಿಬ್ಬು!
ನಿರ್ದೇಶಕರೊಬ್ಬರು ನನಗೆ ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡಬೇಕು ರೂಂಗೆ ಬಾ ಅಂದಿದ್ದರು ಎಂದು ಬಾಲಿವುಡ್ ನಟಿ ಜರೀನ್ ಖಾನ್ ಹಿಂದಿನ ಕಹಿ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ.
Published: 17th September 2019 09:13 PM | Last Updated: 17th September 2019 09:21 PM | A+A A-

ಜರೀನ್ ಖಾನ್
ನವದೆಹಲಿ: ನಿರ್ದೇಶಕರೊಬ್ಬರು ನನಗೆ ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡಬೇಕು ರೂಂಗೆ ಬಾ ಅಂದಿದ್ದರು ಎಂದು ಬಾಲಿವುಡ್ ನಟಿ ಜರೀನ್ ಖಾನ್ ಹಿಂದಿನ ಕಹಿ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ.
32 ವರ್ಷದ ಜರೀನ್ ಖಾನ್ ಸಂದರ್ಶನವೊಂದರಲ್ಲಿ ತಮಗೆ ಎದುರಾಗಿದ್ದ ಕರಾಳ ಘಟನೆಯೊಂದನ್ನು ವಿವರಿಸಿದ್ದಾರೆ. ಆಗ ನಾನು ಚಿತ್ರರಂಗಕ್ಕೆ ಹೊಸಬಳು. ನಿರ್ದೇಶಕರೊಬ್ಬರು ನನ್ನ ಕರೆದು ನಿಮ್ಮೊಂದಿಗೆ ಕಿಸ್ಸಿಂಗ್ ಸೀನಗಳ ರಿಹರ್ಸಲ್ ಮಾಡಬೇಕು ಎಂದು ಕೇಳಿದರು. ಅದಕ್ಕೆ ನಾನು ನೋ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.
ಜರೀನ್ ಖಾನ್ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ವೀರ್ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶಿಸಿದ್ದರು. ನಂತರ ಹೌಸ್ ಫುಲ್, ಹೇಟ್ ಸ್ಟೋರಿ 3 ಮತ್ತು ಅಕ್ಸರ್ 2 ಚಿತ್ರಗಳಲ್ಲಿ ನಟಿಸಿದ್ದರು.