ಕಂಗನಾ ಸೋದರಿ ರಂಗೋಲಿ ಚಾಂಡೆಲ್ ಟ್ವಿಟರ್ ಖಾತೆ ಅಮಾನತು

ಮೊರಾದಾಬಾದ್ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ಮತ್ತು ಮ್ಯಾನೇಜರ್ ರಂಗೋಲಿ ಚಾಂಡೆಲ್ ಅವರ ಖಾತೆಯನ್ನು ಟ್ವೀಟರ್ ಸಂಸ್ಥೆಯೇ  ಇಂದು ಅಮಾನತು ಮಾಡಿದೆ
ರಂಗೋಲಿ ಚಾಂಡೆಲ್, ಕಂಗನಾ
ರಂಗೋಲಿ ಚಾಂಡೆಲ್, ಕಂಗನಾ
Updated on

ಮುಂಬೈ: ಮೊರಾದಾಬಾದ್ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ಮತ್ತು ಮ್ಯಾನೇಜರ್ ರಂಗೋಲಿ ಚಾಂಡೆಲ್ ಅವರ ಖಾತೆಯನ್ನು ಟ್ವೀಟರ್ ಸಂಸ್ಥೆಯೇ  ಇಂದು ಅಮಾನತು ಮಾಡಿದೆ

ಮೊರಾದಾಬಾದ್ ನಲ್ಲಿ ಕೊರೋನಾವೈರಸ್ ಶಂಕಿತರನ್ನು ತಪಾಸಣೆ ಮಾಡುತ್ತಿದ್ದ ವೈದ್ಯರ ತಂಡವೊಂದರ ಮೇಲೆ ಕೆಲವರ ದಾಳಿಯನ್ನು ಉಲ್ಲೇಖಿಸಿ , ಇಂತಹ ಜನರನ್ನು ಗುಂಡಿಕ್ಕಿ ಕೊಲ್ಲಿ ಎಂದು ಚಾಂಡೆಲ್ ಬರೆದಿದ್ದರು. ಇದಕ್ಕೆ ಅನೇಕ ಟ್ವಿಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಕೆ ನಿಯಮಗಳನ್ನು ಉಲ್ಲೇಖಿಸಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಚಾಂಡೆಲ್ ಅವರ ಖಾತೆಯನ್ನು ಟ್ವಿಟರ್ ಸಂಸ್ಥೆ ಅಮಾನತುಪಡಿಸಿದೆ. 

ಹಿಂಸೆ, ದ್ವೇಷ, ಭಯೋತ್ಪಾದನೆ, ನಿಂದನೆ ಅಥವಾ ಕಿರುಕುಳದಂತಹ ಆಕ್ಷೇಪಾರ್ಹ, ಪ್ರಚೋದನಾಕಾರಿ ಟ್ವೀಟ್ ಗಳನ್ನು ಹಾಕಿದವರ ಖಾತೆಗಳನ್ನು  ಟ್ವೀಟರ್ ಸಂಸ್ಥೆಯೇ ಅಮಾನತು ಮಾಡುತ್ತದೆ

ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್ ಮೇಲೆ ಕಲ್ಲು ತೂರಾಟದಿಂದ ಡಾಕ್ಟರ್ ಸೇರಿದಂತೆ ಮೂವರು ಗಾಯಗೊಂಡಿರುವುದಾಗಿ ಮುಖ್ಯ ವೈದ್ಯಾಧಿಕಾರಿ ಡಾ.ಎಸ್. ಪಿ ಗರ್ಗ್ ಹೇಳಿಕೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com