
ಮುಂಬೈ: ಲಾಕ್ ಡೌನ್ ಮಧ್ಯೆ ಬಾಲಿವುಡ್ ನಟಿ ಹಾಗೂ ಫಿಟ್ನೆಸ್ ಉತ್ಸಾಹಿ ದಿಶಾ ಪಟಾನಿ ಸಾಮಾಜಿಕ ಮಾಧ್ಯಮಗಳಲ್ಲಿ ರಸವತ್ತಾದ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಬೆಯೋನ್ಸ್ ಟ್ರಾಕ್ 'ಯೋನ್ಸ್ ಗೆ'' ದಿಶಾ ಪಟಾನಿ ದೇಹ ಸಿರಿ ಪ್ರದರ್ಶಿಸಿ ಕಿಲ್ಲರ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಇತ್ತೀಚಿಗೆ ತಮ್ಮ ಇನ್ಸಾಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ವಿಶ್ವದಾದ್ಯಂತ ವೈರಲ್ ಆಗಿದೆ.
ಈ ವಿಡಿಯೋ ಸಾಕಷ್ಟು ಅಭಿಮಾನಿಗಳ ಹೃದಯವನ್ನು ಗೆದ್ದಿದ್ದು, ಎಲ್ಲಿ ಅವ್ರಾಮ್ ಸೇರಿದಂತೆ ಅನೇಕ ಅಭಿಮಾನಿಗಳು, ಸ್ನೇಹಿತರು ಮೆಚ್ಚಿಕೊಂಡಿದ್ದಾರೆ. ನೃತ್ಯ ಕೌಶಲ್ಯದಿಂದ ಜನಪ್ರಿಯರಾಗಿರುವ ದಿಶಾ ಪಟಾನಿ, ಅನೇಕ ಸಂಗೀತ ವಿಡಿಯೋ, ವಿಶೇಷ ಹಾಡುಗಳ ಭಾಗವಾಗಿದ್ದಾರೆ. ಇತ್ತೀಚಿಗೆ ಭಾಘಿ -3 ಚಿತ್ರದ ಗೀತೆಯೊಂದಕ್ಕೆ ಹೆಜ್ಜೆ ಹಾಕಿದ್ದರು.
ದಿಶಾ ಕೊನೆಯ ಬಾರಿಗೆ "ಮಲಾಂಗ್" ಚಿತ್ರದಲ್ಲಿ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಕುನಾಲ್ ಕೆಮ್ಮು ಕೂಡ ಇದ್ದಾರೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಮುಂದಿನ ರಾಧೆ, ಯುವರ್ ಮೋಸ್ಟ್ ವಾಂಟೆಡ್ ಭಾಯ್" ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
Advertisement