'ರಾವಣನಲ್ಲಿ ಮಾನವೀಯ ಗುಣಗಳು' ಹೇಳಿಕೆ: ಕ್ಷಮೆ ಯಾಚಿಸಿದ ಬಾಲಿವುಡ್ ನಟ ಸೈಫ್ ಆಲಿಖಾನ್

ರಾಕ್ಷಸ ರಾಜ ರಾವಣನಲ್ಲಿರುವ ಮಾನವೀಯ ಗುಣಗಳನ್ನು 'ಆದಿಪುರುಷ್’ ನಲ್ಲಿ ಅನಾವರಣಗೊಳ್ಳಲಿದೆ. ಶ್ರೀರಾಮನೊಂದಿಗೆ ಯುದ್ಧ ನಿರಾಕರಿಸುವ ಅಂಶ ಚಿತ್ರದಲ್ಲಿರಲಿದೆ ಎಂದು ಹೇಳಿದ್ದರು.
ಆದಿಪುರುಷ್-ಸೈಫ್ ಆಲಿಖಾನ್
ಆದಿಪುರುಷ್-ಸೈಫ್ ಆಲಿಖಾನ್
Updated on

ಮುಂಬೈ: ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ 'ಆದಿಪುರುಷ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಓಂ ರಾವತ್ ಈ ಚಿತ್ರದ ನಿರ್ದೇಶಕರು.

ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ, ಸೈಫ್ ಅಲಿ ಖಾನ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ನಾಯಕ ಯಾರು ಎಂಬುದು ಅಂತಿಮಗೊಂಡಿಲ್ಲ. ಎರಡು ದಿನಗಳ ಹಿಂದೆ ಚಿತ್ರದ ಬಗ್ಗೆ ಸೈಫ್ ಆಲಿಖಾನ್ ನೀಡಿದ್ದ ಹೇಳಿಕೆ ಅವರನ್ನು ವಿವಾದಕ್ಕೀಡು ಮಾಡಿದೆ. 

ರಾಕ್ಷಸ ರಾಜ ರಾವಣನಲ್ಲಿರುವ ಮಾನವೀಯ ಗುಣಗಳನ್ನು 'ಆದಿಪುರುಷ್’ ನಲ್ಲಿ ಅನಾವರಣಗೊಳ್ಳಲಿದೆ. ಶ್ರೀರಾಮನೊಂದಿಗೆ ಯುದ್ಧ ನಿರಾಕರಿಸುವ ಅಂಶ ಚಿತ್ರದಲ್ಲಿರಲಿದೆ ಎಂದು ಹೇಳಿದ್ದರು. ಸೈಫ್ ಆಲಿಖಾನ್ ಅವರ ಹೇಳಿಕೆಗೆ ಬಿಜೆಪಿ ಮುಖಂಡ ರಾಮ್ ಕದಮ್ ಸೇರಿದಂತೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಸೈಫ್ ಆಲಿಖಾನ್ ಅವರ ಮಾತುಗಳು ಆಘಾತಕಾರಿ ಎಂದು ರಾಮ್ ಕದಮ್ ಟ್ವೀಟ್ ಮಾಡಿದ್ದಾರೆ. ರಾವಣನನ್ನು ಒಳ್ಳೆಯ ಮನುಷ್ಯನಂತೆ ತೆರೆಯ ಮೇಲೆ ತೋರಿಸಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸೈಫ್ ಆಲಿಖಾನ್ ಪ್ರತಿಕ್ರಿಯಿಸಿದ್ದು, ಇತರರ ಭಾವನೆಗಳಿಗೆ ಘಾಸಿಗೊಳಿಸುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ.  ಕಥೆಯನ್ನು ವಿರೂಪಗೊಳಿಸದೆ ಚಿತ್ರವನ್ನು ತೆರೆಯ ಮೇಲೆ ತರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 

'ಸಂದರ್ಶನವೊಂದರಲ್ಲಿ ತಾವು ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಕೆಲವರ ಭಾವನೆಗಳನ್ನು ಘಾಸಿಗೊಳಿಸಿವೆ. ವಿವಾದಗಳಿಗೆ ದಾರಿ ಮಾಡಿದೆ ಎಂದು ತಿಳಿದುಬಂದಿದೆ. ಇದು ನನ್ನ ಉದ್ದೇಶವಾಗಿರಲಿಲ್ಲ ಎಂದು ಸೈಫ್ ಹೇಳಿದ್ದಾರೆ.

Statement from Saif Ali Khan:
I’ve been made aware that one of my statements during an interview, has caused a controversy and hurt people’s sentiments. This was never my intention or meant that way. I would like to sincerely apologise to everybody and withdraw my statement. pic.twitter.com/M5UZaK6qZD

— ETimes (@etimes) December 6, 2020

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com