ನನ್ನ ಪಾರ್ಟಿಯಲ್ಲಿ ಯಾವ ಮಾದಕವಸ್ತುಗಳ ಸೇವನೆ ಇರಲಿಲ್ಲ: ಎನ್‌ಸಿಬಿಗೆ ಕರಣ್ ಜೋಹರ್ ಉತ್ತರ

ನನ್ನ ಪಾರ್ಟಿಗಳಲ್ಲಿ ಯಾವುದೇ ಬಗೆಯ ಮಾದಕವಸ್ತು ಬಳಕೆ ಇರುವುದಿಲ್ಲ ಎಂದು ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್  ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂದೆ ತಮ್ಮ ಹೇಳಿಕೆ ಸಲ್ಲಿಸಿದ್ದಾರೆ,
ಕರಣ್ ಜೋಹರ್
ಕರಣ್ ಜೋಹರ್
Updated on

ನನ್ನ ಪಾರ್ಟಿಗಳಲ್ಲಿ ಯಾವುದೇ ಬಗೆಯ ಮಾದಕವಸ್ತು ಬಳಕೆ ಇರುವುದಿಲ್ಲ ಎಂದು ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್  ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂದೆ ತಮ್ಮ ಹೇಳಿಕೆ ಸಲ್ಲಿಸಿದ್ದಾರೆ,

ಜೋಹರ್ ತಮ್ಮ ವಕೀಲರ ಮೂಲಕ ಎನ್‌ಸಿಬಿ ಕೋರಿದ ಹೇಳಿಕೆ ಮತ್ತು ವಿವರಗಳನ್ನು ಸಲ್ಲಿಸಿದರು.

ಈ ಹಿಂದೆ ಅವರು ಆಯೋಜಿಸಿದ್ದ ಪಾರ್ಟಿಯ ವಿಡಿಯೋವೊಂದರ ಬಗ್ಗೆ ವಿವರ ಕೋರಿ ಎನ್‌ಸಿಬಿ ಗುರುವಾರ ಕರಣ್ ಜೋಹರ್‌ಗೆ ನೋಟಿಸ್ ನೀಡಿತ್ತು. ಈ ಪಾರ್ಟಿಯ ಕೆಲವು ವಿಡಿಯೋ ತುಣುಕುಗಳನ್ನು ಸಹ ಪೆನ್ ಡ್ರೈವ್‌ನಲ್ಲಿ ಸಲ್ಲಿಸಲಾಗಿದೆ ಎಂದು ಏಜೆನ್ಸಿಯ ಮೂಲಗಳು ತಿಳಿಸಿವೆ.

ಅವರ ನಿವಾಸದಲ್ಲಿ ಜುಲೈ 28, 2019 ರಂದು ಅವರು ಆಯೋಜಿಸಿದ್ದ ಪಾರ್ಟಿಯ ಅತಿಥಿಗಳ ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕರಣ್ ಜೋಹರ್ ತಮ್ಮ ಸಲ್ಲಿಕೆಯಲ್ಲಿ ಆರೋಪ ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು ಮತ್ತು ಪಾರ್ಟಿಯಲ್ಲಿ ಯಾವುದೇ ಮಾದಕ ದ್ರವ್ಯವನ್ನು ಸೇವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರೆಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com